ಕರ್ನಾಟಕ

karnataka

ETV Bharat / bharat

ICC U19 WC: ಭಾರತದ ನಾಯಕ, ಉಪ ನಾಯಕನಿಗೆ ಕೊರೊನಾ ದೃಢ - ಭಾರತದ ನಾಯಕ, ಉಪ ನಾಯಕನಿಗೆ ಕೊರೊನಾ ದೃಢ

ಧುಲ್ ಮತ್ತು ರಶೀದ್ ಸೇರಿದಂತೆ ಆರು ಆಟಗಾರರಿಗೆ ಕೊರೊನಾ ದೃಢಪಟ್ಟಿದೆ. ಅವರೆಲ್ಲರನ್ನು ಈಗ ಕ್ವಾರಂಟೈನ್​ ನಲ್ಲಿ ಇರಿಸಲಾಗಿದೆ.

ICC U19 WC: ಭಾರತದ ನಾಯಕ, ಉಪ ನಾಯಕನಿಗೆ ಕೊರೊನಾ ದೃಢ
ICC U19 WC: ಭಾರತದ ನಾಯಕ, ಉಪ ನಾಯಕನಿಗೆ ಕೊರೊನಾ ದೃಢ

By

Published : Jan 19, 2022, 11:09 PM IST

ನವದೆಹಲಿ: ಭಾರತ ಅಂಡರ್​ 19 ನ ನಾಯಕ ಯಶ್ ಧುಲ್ ಮತ್ತು ಎಸ್​ ಕೆ ರಶೀದ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಇವರನ್ನು ಈಗ ಪ್ರತ್ಯೇಕವಾಗಿ ಇರಿಸಲಾಗಿದೆ. ಇಂದು ನಡೆಯುತ್ತಿರುವ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ನಿಶಾಂತ್​ ಸಿಧು ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಧುಲ್ ಮತ್ತು ರಶೀದ್ ಸೇರಿದಂತೆ ಆರು ಆಟಗಾರರಿಗೆ ಕೊರೊನಾ ದೃಢಪಟ್ಟಿದೆ. ಅವರೆಲ್ಲರನ್ನು ಈಗ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಧುಲ್ ಅನುಪಸ್ಥಿತಿಯಲ್ಲಿ, ನಿಶಾಂತ್ ಸಿಧು ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಬಿ ಗುಂಪಿನ ಪಂದ್ಯದಲ್ಲಿ ಭಾರತ ಕೋಲ್ಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದ ನಂತರ ಭಾರತವು ಶನಿವಾರದಂದು ತನ್ನ ಕೊನೆಯ ಗುಂಪಿನ ಬಿ ಪಂದ್ಯದಲ್ಲಿ ಉಗಾಂಡಾವನ್ನು ಎದುರಿಸಲಿದೆ.

ABOUT THE AUTHOR

...view details