ಹೈದರಾಬಾದ್:ಭಾರತೀಯ ವಾಯುಪಡೆಯ (ಐಎಎಫ್) ಸಿ -17 ವಿಮಾನವು 107 ಭಾರತೀಯ ಪ್ರಜೆಗಳು ಸೇರಿದಂತೆ 168 ಪ್ರಯಾಣಿಕರೊಂದಿಗೆ ಇಂದು ಕಾಬೂಲ್ನಿಂದ ಗಾಜಿಯಾದ್ನ ಹಿಂಡನ್ ಸೇನಾ ಬೇಸ್ಗೆ ಆಗಮಿಸಿದೆ.
ಕಾಬೂಲ್ನಿಂದ 168 ಪ್ರಯಾಣಿಕರನ್ನು ಹೊತ್ತು ಗಾಜಿಯಾಬಾದ್ಗೆ ಬಂತು C-17 ವಿಮಾನ - C-17 ವಿಮಾನ
ಇಂದು ಸುಮಾರು 300ಕ್ಕೂ ಹೆಚ್ಚು ಮಂದಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಇದೀಗ 168 ಮಂದಿಯನ್ನ ಭಾರತೀಯ ಸೇನೆ ಸುರಕ್ಷಿತವಾಗಿ ಕರೆತಂದಿದೆ.
ಇಂದು ಸುಮಾರು 300ಕ್ಕೂ ಹೆಚ್ಚು ಮಂದಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಇದೀಗ 168 ಮಂದಿಯನ್ನ ಭಾರತೀಯ ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಇಂದು ಆಗಮಿಸಿರುವ ಪ್ರಯಾಣಿಕರಿಗೆ ಸಿಬ್ಬಂದಿ ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲಿದ್ದಾರೆ.
ಇದಕ್ಕೂ ಮೊದಲು ಅಫ್ಘಾನಿಸ್ತಾನದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ 135 ಭಾರತೀಯ ಪ್ರಜೆಗಳನ್ನು ಖತಾರ್ನ ದೋಹಕ್ಕೆ ಏರ್ಲಿಫ್ಟ್ ಮಾಡಲಾಗಿತ್ತು. ಅಫ್ಘಾನಿಸ್ತಾನದಲ್ಲಿ ಅಂದಾಜು 400 ಭಾರತೀಯ ಪ್ರಜೆಗಳು ಸಿಲುಕಿರುವ ಅಂದಾಜಿಸಿದ್ದು, ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳ ಸಹಕಾರದೊಂದಿಗೆ ಸ್ಥಳಾಂತರಿಸಲಾಗುತ್ತಿದೆ.