ಹೈದರಾಬಾದ್:ಜ್ವರದಿಂದ ಬಳಲುತ್ತಿದ್ದ ಕಾಲಿವುಡ್ ನಟ ಸಿಂಬು(ಸಿಲಂಬರಸನ್) ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ತಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಮೊನ್ನೆಯಷ್ಟೇ ನಟ ಸಿಂಬು ಅವರು ತೀವ್ರ ಜ್ವರದಿಂದಾಗಿ ಖಾಸಗಿ ಆಸ್ಪತ್ರೆಗೆ ದಿಢೀರ್ ದಾಖಲಾಗಿದ್ದರು. ಸಿಂಬು ಸ್ನೇಹಿತ ಹಾಗೂ ನಟರಾದ ಮಹತ್ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ, ಸಿಂಬು ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.