ಹೈದರಾಬಾದ್, ತೆಲಂಗಾಣ: ನಗರದಲ್ಲಿ ಬೆಂಕಿ ಅವಘಡ (Fire Breaks Out) ಪ್ರಕರಣ ಮುನ್ನೆಲೆಗೆ ಬಂದಿದೆ. ವಿಜಯವಾಡ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗಾರ್ಮೆಂಟ್ಸ್ ಅಂಗಡಿ ಮತ್ತು ಪೀಠೋಪಕರಣಗಳ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸವನ್ನೇ ಪಡಬೇಕಾಯಿತು.
ಪ್ರಕರಣ ವಿವರ:ಹೈದರಾಬಾದ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವನಸ್ಥಲಿಪುರಂ ಪನಾಮದಲ್ಲಿ, ರಸ್ತೆಯ ಉದ್ದಕ್ಕೂ ಇರುವ ವಿಡೆಮ್ಸ್ ಬಟ್ಟೆ ಅಂಗಡಿ ಮತ್ತು ಪಕ್ಕದ ಪೀಠೋಪಕರಣಗಳ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಎರಡು ಅಂಗಡಿಗಳು ಒಂದೇ ಮಾಲೀಕರಿಗೆ ಸೇರಿದ್ದಾಗಿವೆ.
ಗಾರ್ಮೆಂಟ್ಸ್ ಅಂಗಡಿ ಹಾಗೂ ಫರ್ನಿಚರ್ ಗೋದಾಮು ಮುಚ್ಚಿ ನಿರ್ವಾಹಕರು ಮನೆಗೆ ತೆರಳಿದ ಬಳಿಕ ಬೆಂಕಿ ಅವಘಡ ಸಂಭವಿಸಿದೆ. ಮೊದಲಿಗೆ ಗಾರ್ಮೆಂಟ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು, ಪಕ್ಕದ ಪೀಠೋಪಕರಣ ಗೋದಾಮಿಗೆ ಆವರಿಸಿಕೊಂಡಿದೆ. ಬೆಂಕಿಯ ರಭಸಕ್ಕೆ ಬಟ್ಟೆ ಅಂಗಡಿ ಮತ್ತು ಪೀಠೋಪಕರಣಗಳ ಗೋದಾಮಿನ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಬೆಂಕಿ ಅವಘಡದ ವೇಳೆ ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸ ಬೇಕಾಗಿದ್ದ ಪ್ರಾಣ ಹಾನಿ ತಪ್ಪಿದಂತಾಗಿದೆ.
ಇನ್ನು ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದರು. ಬಸ್ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಬೆಂಕಿ ಹೊತ್ತಿ ಉರಿಯುತ್ತಿದ್ದಾಗ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ, ಡಿಆರ್ಎಫ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.