ಕೊಯಮತ್ತೂರು: ಅರಣ್ಯ ಪ್ರದೇಶಗಳನ್ನು ದಾಟಿ ಇಂದು ಆನೆಗಳು ಗ್ರಾಮಗಳತ್ತ ಪ್ರವೇಶಿಸುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ, ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರಗಳು ಲಭ್ಯವಾಗುತ್ತಿಲ್ಲ ಎಂದು. ಇದೇ ಕಾರಣಕ್ಕೆ ಆಹಾರ ಮತ್ತು ನೀರು ಅರಸಿ ಅವರು ಇಂದು ಅರಣ್ಯದಂಚಿನ ಗ್ರಾಮಗಳಿಗೆ ಪ್ರವೇಶಿಸುತ್ತಿದೆ ಎಂದು ಇಯರಕಯಿ (ಪ್ರಕೃತಿ) ಸಂರಕ್ಷಣಾ ಸೊಸೈಟಿ ಸಂಸ್ಥಾಪಕರಾದ ಜಲಲುದ್ದೀನ್ ತಿಳಿಸಿದ್ದಾರೆ.
ಯಾವಾಗ ಆನೆ ನಗರಕ್ಕೆ ಪ್ರವೇಶಿಸಿತೋ ಅಂದಿನಿಂದ ಕಾಲ ಕಾಲಕ್ಕೆ ಪ್ರಾಣಿಗಳು ಮತ್ತು ಮಾನವರ ನಡುವೆ ಸಂಘರ್ಷಗಳು ಆರಂಭವಾಗಿದೆ. ಫಲಿತಾಂಶವಾಗಿ ಆನೆ ಮತ್ತು ಮಾನವರು ಸಾವನ್ನಪ್ಪಿದ್ದಾರೆ. ಕಾಡಿನಲ್ಲಿ ಆನೆಗಳಿಗೆ ಆಹಾರ ಸಿಗದ ಕಾರಣ ಅವುಗಳು ಕಳೆಗಳನ್ನು ಸೇವಿಸುತ್ತಿದೆ ಇದರಿಂದ ಅವು ಆರೋಗ್ಯ ಸಮಸ್ಯೆ ಎದುರಿಸಿ ಸಾವನ್ನಪ್ಪುತ್ತಿದೆ. ಇದನ್ನು ತಪ್ಪಿಸಲು ಅವು ಅರಣ್ಯ ಪ್ರದೇಶದಿಂದ ಹೊರಬರುತ್ತಿದೆ. ಇದನ್ನು ತಪ್ಪಿಸಬೇಕು ಎಂದರೆ ಆನೆಗಳಿಗೆ ಪ್ರಿಯವಾದ ಗಿಡಗಳನ್ನು ನಾವು ಕಾಡಿನಲ್ಲಿ ಬೆಳೆಸಬೇಕಿದೆ. ಹಾಗೇ ಆದಲ್ಲಿ ಮಾತ್ರ ನಾವು ಆನೆಗಳು ಗ್ರಾಮಗಳ ಪ್ರವೇಶವನ್ನು ತಪ್ಪಿಸಬಹುದು ಎಂದಿದ್ದಾರೆ.
ಕೊಯಬತ್ತೂರು ವೈಲ್ಡ್ಲೈಫ್ ಕನ್ಸರ್ವೇಷನ್ ಟ್ರಸ್ಟ್ ಶನ್ಮುಗಮ್ ಕಾರ್ಯದರ್ಶಿ ಸುಂದರಂ ಮಾತನಾಡಿ, ಆನೆಗಳು ಆಹಾರ ಅರಸುತ್ತ ಗ್ರಾಮಗಳತ್ತ ಬಂದು ಕೃಷಿ ಬೆಳೆಗಳನ್ನು ಸೇವಿಸುತ್ತದೆ. ವಿಶೇಷವಾಗಿ ಅವರು ಬಾಳೆ, ಕಬ್ಬು, ತೆಂಗಿನಕಾಯಿ ಮುಂತಾದವುಗಳನ್ನು ಸೇವಿಸುತ್ತದೆ. ಇದನ್ನು ತಪ್ಪಿಸಬೇಕು ಎಂದರೆ ಆನೆಗಳ ನೆಚ್ಚಿನ ಆಹಾರಗಳನ್ನು ಕಾಡಿನಲ್ಲಿ ಬೆಳೆಸಬೇಕಿದೆ ಎಂದರು.