ಗುವಾಹಟಿ: ಅಸ್ಸೋಂನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಹಾಗೂ ಸಚಿವರಾಗಿ12 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಿದರು.
ಅಸ್ಸೋಂ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಹಿಮಂತ ಬಿಸ್ವಾ ಶರ್ಮಾ.. ಸಂಪುಟಕ್ಕೆ 12 ಸಚಿವರ ಸೇರ್ಪಡೆ - ಅಸ್ಸೋಂನ ನೂತನ ಮುಖ್ಯಮಂತ್ರಿ
ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸೋಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಸ್ಸೋಂ ಸಿಎಂ ಆಗಿ ಅಧಿಕಾರ ಸ್ವೀಕರಿಸದ ಹಿಮಂತ ಬಿಸ್ವಾ ಶರ್ಮಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ಹಿಮಂತ ಬಿಸ್ವಾ ಹಾಗೂ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಒಟ್ಟು 12 ಸಚಿವರು ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಅವರ ಹೆಸರು ಈ ಕೆಳಕಂಡಂತಿದೆ.
- ಚಂದ್ರಮೋಹನ್ ಪಟೋರಿ (ಬಿಜೆಪಿ)
- ರಂಜಿತ್ ದಾಸ್ (ಬಿಜೆಪಿ)
- ಬಿಸ್ವಾಜಿತ್ ದೈಮರಿ (ಬಿಜೆಪಿ)
- ಜೋಗನ್ ಮಹನ್ (ಬಿಜೆಪಿ)
- ಹಿತೇಂದ್ರನಾಥ ಗೋಸ್ವಾಮಿ (ಬಿಜೆಪಿ)
- ಅಜಂತಾ ನಿಯೋಗ್ (ಬಿಜೆಪಿ)
- ಪಿಯೂಷ್ ಹಜಾರಿಕಾ (ಬಿಜೆಪಿ)
- ಸಂಜಯ್ ಕಿಸಾನ್ (ಬಿಜೆಪಿ)
- ಕೌಶಿಕ್ ರೇ (ಬಿಜೆಪಿ)
- ಅತುಲ್ ಬೋರಾ (ಎಜೆಪಿ)
- ಕೇಶಬ್ ಮಹಾಂತ (ಎಜೆಪಿ)
- ಗೋಬಿಂದ ಬಸುಮಾಟರಿ (ಯುಪಿಪಿಎಲ್)
2015ರವರೆಗೂ ಕಾಂಗ್ರೆಸ್ನಲ್ಲಿದ್ದ ಹಿಮಂತ ಬಿಸ್ವಾ, ಅಸ್ಸೋಂನಲ್ಲಿ ಕಾಂಗ್ರೆಸ್ನ ತರುಣ್ ಗೊಗೊಯ್ ಸರ್ಕಾರವಿದ್ದಾಗ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ಸರ್ಬಾನಂದ ಸೊನೊವಾಲ್ ಸರ್ಕಾರದಲ್ಲಿ ಆರೋಗ್ಯ, ವಿತ್ತ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.