ಹೈದರಾಬಾದ್: ಟಾಲಿವುಡ್ ನಟ ಜೂ. ಎನ್ಟಿಆರ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.
ಕಳೆದ ಎರಡು ದಿನದ ಹಿಂದೆ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್'(RRR) ಚಿತ್ರತಂಡದ ಮೂಲಕ ಕೋವಿಡ್ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದರು. ಈಗ ಈ ಡೆಡ್ಲಿ ವೈರಸ್ ಅವರಿಗೂ ತಾಕಿದ್ದು ಅಭಿಮಾನಿಗಳಲ್ಲಿ ಕೊಂಚ ಆತಂಕ ತರಿಸಿದೆ.
ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜೂ. ಟೈಗರ್, ಇಂದು ಬೆಳಗ್ಗೆ ನಾನು ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೆ. ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಆರಾಮಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ನನ್ನ ಕುಟುಂಬದ ಸದಸ್ಯರೊಂದಿಗೆ ಹೋಂ ಕ್ವಾರಂಟೈನ್ ಆಗಿರುವೆ.
ನನ್ನ ಮನವಿ ಇಷ್ಟೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೂ ಕೂಡ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಸುರಕ್ಷಿತೆ ಎಲ್ಲರ ಸುರಕ್ಷತೆ. ದಯಮಾಡಿ ಸರ್ಕಾರ ಹಾಗೂ ವೈದ್ಯರು ನೀಡಿದ ಪ್ರೋಟೋಕಾಲ್ಗಳನ್ನು ನೀವೂ ಅನುಸರಿಸಿ. ನಾವು ಅನುಸರಿಸಿತ್ತಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.