ಕರ್ನಾಟಕ

karnataka

ETV Bharat / bharat

ನಡುರಸ್ತೆಯಲ್ಲೇ ದೊಣ್ಣೆಯಿಂದ ಎರಡು ಕುಟುಂಬಗಳ ಹೊಡೆದಾಟ: ಕಾರಣವಾಗಿದ್ದು ಕೋಳಿ! - ಕೋಳಿ ವಿಚಾರವಾಗಿ ಹೊಡೆದಾಟ

ಸಾಕು ಕೋಳಿವೊಂದು ಪಕ್ಕದ ಮನೆಗೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದ್ದು, ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

clash between two families erupted about a hen
clash between two families erupted about a hen

By

Published : Jan 13, 2022, 9:49 PM IST

ಕರ್ನೂಲ್​(ಆಂಧ್ರಪ್ರದೇಶ):ಭೂ ವಿವಾದ, ಮನೆ ಮುಂದಿನ ರಸ್ತೆ ವಿಚಾರವಾಗಿ ಅಕ್ಕ-ಪಕ್ಕದ ಮನೆಯವರ ಮಧ್ಯೆ ಜಗಳವಾಗುವುದು ಸಾಮಾನ್ಯ. ಆದರೆ, ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ಕೋಳಿ ವಿಚಾರಕ್ಕೆ ಎರಡು ಕುಟುಂಬಗಳು ನಡುರಸ್ತೆಯಲ್ಲೇ ದೊಣ್ಣೆಯಿಂದ ಬಡಿದಾಡಿಕೊಂಡಿವೆ.

ಕರ್ನೂಲ್​ ಜಿಲ್ಲೆಯ ಆದೋನಿಯಲ್ಲಿ ಈ ಘಟನೆ ನಡೆದಿದೆ. ಸಾಕು ಕೋಳಿಯೊಂದು ನೆರೆಮನೆಯೊಳಗೆ ಹೋಗಿರುವ ವಿಚಾರಕ್ಕೆ ಎರಡು ಕುಟುಂಬ ನಡುರಸ್ತೆಯಲ್ಲೇ ಸಂಘರ್ಷಕ್ಕಿಳಿವೆ. ಈ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ನಡುರಸ್ತೆಯಲ್ಲೇ ದೊಣ್ಣೆಯಿಂದ ಹೊಡೆದಾಡಿಕೊಂಡ ಎರಡು ಕುಟುಂಬ

ಇದನ್ನೂ ಓದಿ:Photos: ಯುಪಿ ಚುನಾವಣೆಯಲ್ಲಿ 'ಬಿಕಿನಿ ಗರ್ಲ್'​ಗೆ ಕಾಂಗ್ರೆಸ್ ಟಿಕೆಟ್!

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ಈಗಾಗಲೇ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ತಮ್ಮ ಮನೆಯ ಸಾಕು ಕೋಳಿಯೊಂದು ಪಕ್ಕದ ಮನೆಯೊಳಗೆ ಹೋಗಿದ್ದರಿಂದ ಅದನ್ನು ತೆಗೆದುಕೊಂಡು ಬರಲು ಮಹಿಳೆಯೋರ್ವಳು ಹೋಗಿದ್ದಾಳೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಸಂತ್ರಸ್ತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಇದರಿಂದ ಕೋಪಗೊಂಡಿರುವ ನೆರೆಮನೆಯವರು ಪೊಲೀಸರಿಗೆ ದೂರು ನೀಡುತ್ತೀರಾ? ಎಂದು ದೊಣ್ಣೆಯಿಂದ ದಾಳಿ ನಡೆಸಿದ್ದಾರೆ. ಇದಾದ ನಂತರ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿದೆ.

ABOUT THE AUTHOR

...view details