ನವದೆಹಲಿ: ಚಂಡೀಗಢದಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಕರೆತಂದ ಮೃತ ವ್ಯಕ್ತಿಯೊಬ್ಬರ ಅಂಗಾಂಗವನ್ನು ಗ್ರೀನ್ ಕಾರಿಡಾರ್ ಮೂಲಕ ದೆಹಲಿ ಟ್ರಾಫಿಕ್ ಪೊಲೀಸರು 11 ನಿಮಿಷಗಳಲ್ಲಿ ವಿಮಾನ ನಿಲ್ದಾಣದಿಂದ ಏಮ್ಸ್ ಆಸ್ಪತ್ರೆಗೆ ಸಾಗಿಸಿದರು.
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ, ನಿನ್ನೆ ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಚಂಡೀಗಢದಿಂದ ಇಂಡಿಗೋ ವಿಮಾನದಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರಿಗೆ ಕಸಿ ಮಾಡಲು ಜೀವಂತ ಹೃದಯ ತರಲಾಯಿತು. ಇದಾದ ಬಳಿಕ ಏಮ್ಸ್ನ ORBO ವಿಭಾಗದ ಮುಖ್ಯಸ್ಥರಿಂದ ಬಂದ ಮನವಿಯ ಆಧಾರದ ಮೇಲೆ12 ಕಿ.ಮೀ ದೂರವನ್ನು 11 ನಿಮಿಷಗಳಲ್ಲಿ ತಲುಪಲಾಯಿತು. ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ವಿಮಾನ ನಿಲ್ದಾಣದಿಂದ AIIMS ಆಸ್ಪತ್ರೆಗೆ 11 ನಿಮಿಷದಲ್ಲಿ ಹೃದಯ ತೆಗೆದುಕೊಂಡು ಹೋಗಲಾಯಿತು ಎಂದರು.