ಕರ್ನಾಟಕ

karnataka

ETV Bharat / bharat

ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ: ದುರ್ಗಾ ಪೂಜೆ ಮುಗಿಸಿ ಬರುತ್ತಿದ್ದ ನಾಲ್ವರ ಸಾವು - bike accident in odisha

ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಯುವಕರು ಸ್ಥಳದಲ್ಲೇ ಅಸುನೀಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

head-on-collison-between-two-bikes-in-odisha-4-killed-3-injured
ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ: ದುರ್ಗಾ ಪೂಜೆ ಮುಗಿಸಿ ಬರುತ್ತಿದ್ದ ನಾಲ್ವರು ಸಾವು

By ETV Bharat Karnataka Team

Published : Oct 25, 2023, 11:25 AM IST

ನುವಾಪಾಡಾ (ಒಡಿಶಾ):ದುರ್ಗಾ ಪೂಜಾ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವೇಳೆ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಒಡಿಶಾದ ನುವಾಪಾದ ಜಿಲ್ಲೆಯ ರಾಜ್‌ಪುರ ಗ್ರಾಮದ ಬಳಿ ಬಿಜು ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ದುರ್ಘಟನೆಯಲ್ಲಿ ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ.

ಮೃತರಲ್ಲಿ ಇಬ್ಬರು ಕಮಲಮಾಲ್ ಗ್ರಾಮದವರು, ಓರ್ವ ಭೀಮಪದರ್ ಗ್ರಾಮದವ ಮತ್ತು ಮತ್ತೋರ್ವ ಜಿಲ್ಲೆಯ ಭೈನುಶಾದರ ಗ್ರಾಮದವ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳವಾರ ಸ್ಥಳೀಯ ದುರ್ಗಾ ಪೂಜಾ ಸಮಿತಿಯೊಂದು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರಳಿದ್ದ ಯುವಕರು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಒಂದು ಬೈಕ್‌ನಲ್ಲಿ ನಾಲ್ವರು ಸಿನಪಾಲಿ ಕಡೆಯಿಂದ ಬರುತ್ತಿದ್ದರೆ, ಮೂವರು ಮತ್ತೊಂದು ಬೈಕ್‌ನಲ್ಲಿ ಬೋಡೆನ್‌ನಿಂದ ಸಿನಪಾಲಿ ಕಡೆಗೆ ಹೋಗುತ್ತಿದ್ದರು. ಘಟನೆಯಲ್ಲಿ ನಾಲ್ವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡ ಇತರ ಮೂವರನ್ನು ಬೋಡೆನ್ ಮತ್ತು ನುವಾಪಾಡಾ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ದೇವರಗಟ್ಟು ಬನ್ನಿ ಉತ್ಸವ : ದಂಡ ಕಾಳಗದಲ್ಲಿ 3 ಸಾವು.. ನೂರಕ್ಕೂ ಅಧಿಕ ಮಂದಿಗೆ ಗಾಯ

ಪ್ರತ್ಯೇಕ ಘಟನೆ, ಒಂದೇ ಕುಟುಂಬದ ಐವರು ಸಾವು:ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನವು ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಮೃತರಾದ ಘಟನೆ ಜಾರ್ಖಂಡ್​ನ ದಿಯೋಘರ್​ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಸಿಕಾಟಿಯಾ ಬ್ಯಾರೇಜ್​ ಕಾಲುವೆಗೆ ವಾಹನ ಬಿದ್ದಿತ್ತು.

ದುಮ್ದುಮಿಯ ಅಸನ್ಸೋಲ್​ ಎಂಬಲ್ಲಿನ ನಿವಾಸಿಗಳಾದ ಮನೋಜ್​ ಚೌಧರಿ ತಮ್ಮ ಕುಟುಂಬದೊಂದಿಗೆ ಗಿರಿದಿಹ್​ನ ಬನ್ಸ್​ದಿಹ್​ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೊರಟಾಗ ದುರ್ಘಟನೆ ಸಂಭವಿಸಿದೆ. ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಶರತ್​ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅಲ್ಲದೇ,​ ಪ್ರಭಾರಿ ಶೈಲೇಶ್​ ಕುಮಾರ್​ ಹಾಗೂ ಎಸ್​ಡಿಪಿಒ ವೀರೇಂದ್ರ ಕುಮಾರ್​ ಬಂಕಾ ಕೂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ರೈಲು ಡಿಕ್ಕಿಯಾಗಿ ಮೂವರು ಬಾಲಕರು ಮೃತ:ಎಲೆಕ್ಟ್ರಿಕ್​ ರೈಲಿಗೆ ಸಿಲುಕಿ ಕರ್ನಾಟಕದ ಮೂವರು ವಿಶೇಷಚೇತನ ಬಾಲಕರು ಮೃತಪಟ್ಟ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಮಂಗಳವಾರ ನಡೆದಿತ್ತು. ಮೃತರನ್ನು ರವಿ (10), ಮಂಜುನಾಥ್ (11) ಹಾಗೂ ಸುರೇಶ್ (15)​ ಎಂದು ಗುರುತಿಸಲಾಗಿದೆ. ಮೂವರು ಬಾಲಕರು ರಜೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನೆಲೆಸಿರುವ ಪೋಷಕರ ಬಳಿಗೆ ತೆರಳುತ್ತಿದ್ದರು. ಇವರೆಲ್ಲರೂ ಸಹೋದರರಾಗಿದ್ದು, ಈ ಪೈಕಿ ಇಬ್ಬರು ಕಿವುಡ ಮತ್ತು ಮೂಗರಾಗಿದ್ದರು. ಮತ್ತೊಬ್ಬನಿಗೆ ಮಾತನಾಡಲು ಬರುತ್ತಿರಲಿಲ್ಲ. ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details