ಕರ್ನಾಟಕ

karnataka

ETV Bharat / bharat

ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ: 100, 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ 106ರ ಅಜ್ಜಿ!

ಉತ್ತರಾಖಂಡದಲ್ಲಿ ನಡೆಯುತ್ತಿರುವ 18ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ವೃದ್ಧ ದಂಪತಿ 3,000 ಮೀಟರ್ ನಡಿಗೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

Etv Bharatharyana-charkhi-dadri-resident-106-year-old-ramabai-won-gold-medal-in-18th-national-athletics-championship-in-dehradun
ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ: 100 ಮತ್ತು 200 ಮೀಟರ್‌ಗಳ ಓಟದ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ 106 ವರ್ಷದ ವೃದ್ಧೆ!

By

Published : Jun 26, 2023, 10:54 PM IST

ಡೆಹ್ರಾಡೂನ್ (ಉತ್ತರಾಖಂಡ): ಯುವರಾಣಿ ಮಹೇಂದ್ರ ಕುಮಾರಿ ಅವರ ಸ್ಮರಣಾರ್ಥ ಆಯೋಜಿಸಿರುವ 18ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸೋಮವಾರ ಆರಂಭವಾಯಿತು. ಎರಡು ದಿನಗಳ ಕಾಲ ನಡೆಯಲಿರುವ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 800ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ 5 ವರ್ಷದಿಂದ 106 ವರ್ಷದೊಳಗಿನ ಆಟಗಾರರು ಭಾಗವಹಿಸುತ್ತಿರುವುದು ವಿಶೇಷ. ಯುವಕರಲ್ಲಿ ಕ್ರೀಡೆಗಳ ಕುರಿತು ಆಸಕ್ತಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಸ್ಪರ್ಧೆಯನ್ನು ಕಾಂಗ್ರೆಸ್ ಮುಖಂಡ ಸೂರ್ಯಕಾಂತ ದಶಮಾನ ನಡೆಸುತ್ತಿದ್ದಾರೆ.

ಇಂದು ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಹರಿಯಾಣದ ಚಾರ್ಖಿ ದಾದ್ರಿ ನಿವಾಸಿ 106 ವರ್ಷದ ರಮಾಬಾಯಿ. 100, 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾರೆ. ಶಾಟ್‌ಪುಟ್‌ನಲ್ಲೂ ಭಾಗವಹಿಸಿದ ಅವರು ನೆರೆದಿದ್ದ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದರು. ಹರಿಯಾಣದಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತರಾದ 74 ವರ್ಷದ ಜೈಸಿಂಗ್ ಮಲಿಕ್ 3,000 ಮೀಟರ್ ನಡಿಗೆಯಲ್ಲಿ ಚಿನ್ನ ಗೆದ್ದರೆ, ಅವರ 70 ವರ್ಷದ ಪತ್ನಿ ರಾಮರತಿ ದೇವಿ ಅವರು 3000 ಮೀಟರ್ ನಡಿಗೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಇಂದಿನ ಯುವಕರು ಕ್ರೀಡೆ ಹಾಗೂ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢರಾಗಿ, ಆರೋಗ್ಯವಂತರಾಗಿ ಇರಬಹುದು ಎಂದು ಯುವಜನತೆಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಜೀತ್ ಕೌರ್ ಮಾತನಾಡಿ, ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ 5 ವರ್ಷದಿಂದ 100 ವರ್ಷ ಮೇಲ್ಪಟ್ಟ ಆಟಗಾರರು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕ್ರೀಡೆಯತ್ತ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಲ್ಲಿ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಆಳ್ವಾರ್ ಮಾಜಿ ಸಂಸದೆ ಮಾತನಾಡಿ, ಯುವರಾಣಿ ಮಹೇಂದ್ರ ಕುಮಾರಿ ಅವರ ಪುಣ್ಯತಿಥಿಯನ್ನು ಆಟದ ರೂಪದಲ್ಲಿ ಆಚರಿಸಲಾಗಿದೆ ಎಂದರು. ನಾಳೆ ನಡೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಗತಿಮಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್ ಪೀಸ್ ಪತ್ತೆ! ಉದ್ಯೋಗಿ ಅಮಾನತು

ಪ್ರಧಾನಿ ನರೇಂದ್ರ ಮೋದಿ ನನ್ನ ಪುತ್ರ, ನನ್ನೆಲ್ಲ ಆಸ್ತಿ ಅವರಿಗೆ ಎಂದ ವೃದ್ಧೆ:ವಯೋವೃದ್ಧೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ತನ್ನ ಸ್ವಂತ ಮಗ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಇವರ ಪುತ್ರಪ್ರೀತಿ ಇಷ್ಟಕ್ಕೇ ಸೀಮಿತವಾಗಿಲ್ಲ, ತನ್ನ ಆಸ್ತಿಯನ್ನು ಮೋದಿಯವರ ಹೆಸರಿಗೆ ಬರೆಯುವುದು ಕೂಡ ಇವರ ಇಚ್ಛೆಯಾಗಿದೆ. ಮಧ್ಯಪ್ರದೇಶದ ರಾಜಗಢ ನಿವಾಸಿಯಾಗಿರುವ 100 ವರ್ಷದ ವೃದ್ಧೆ ಮಾಂಗಿ ಬಾಯಿ ತಂವರ್ ತನ್ನ 25 ಬಿಘಾ ಜಮೀನನ್ನು ಪ್ರಧಾನಿ ಮೋದಿ ಹೆಸರಿಗೆ ಬರೆಯಲು ತಯಾರಾಗಿರುವುದು ಅಚ್ಚರಿ ಮೂಡಿಸಿದೆ. ಸಾಯುವ ಮುನ್ನ ಒಂದು ಬಾರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ಈಕೆಯ ಮಹದಾಸೆಯಾಗಿದೆ.

ಈ ಕುರಿತು ವೃದ್ಧೆ ಪ್ರತಿಕ್ರಿಯೆ ನೀಡಿ, "ಮೋದಿಜಿ ನನ್ನ ಮಗ. ಮೋದಿಯವರೇ ನನಗೆ ಮನೆ ನೀಡಿದ್ದಾರೆ, ನನಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಧಾನ್ಯ ಖರೀದಿಸಲು ಹಣ ಕೂಡ ನೀಡುತ್ತಿದ್ದಾರೆ. ಮೋದಿಯವರ ಸಹಾಯದಿಂದಲೇ ನಾನು ತೀರ್ಥಯಾತ್ರೆ ಮಾಡಿದ್ದೇನೆ" ಎಂದರು. ಈ ಮಾತುಗಳನ್ನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ABOUT THE AUTHOR

...view details