ಕರ್ನಾಟಕ

karnataka

ETV Bharat / bharat

'ಹರ್​ ಘರ್ ತಿರಂಗಾ' ಅಲ್ಲ, ವಿದ್ಯಾರ್ಥಿಗಳಿಂದ 'ಹರ್​ ಗಲ್​ ಪೇ ತಿರಂಗಾ' ಅಭಿಯಾನ

ಆಗಸ್ಟ್​ 13ರಿಂದ ದೇಶಾದ್ಯಂತ ಹರ್​ ಘರ್ ತಿರಂಗಾ ಅಭಿಯಾನ ಆರಂಭಗೊಳ್ಳಲಿದೆ. ಇದರ ನಡುವೆ ಗುಜರಾತ್​ನ ಶಾಲೆ ವಿನೂತನ ಯೋಜನೆ ಹಮ್ಮಿಕೊಂಡಿದೆ.

har gal pe triranga
har gal pe triranga

By

Published : Aug 2, 2022, 7:49 PM IST

ಭಾವನಗರ(ಗುಜರಾತ್​):ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಇದರ ಅಂಗವಾಗಿ ಹರ್​ ಘರ್ ತಿರಂಗಾ ಅಭಿಯಾನ ಆರಂಭಗೊಂಡಿದೆ. ಆಗಸ್ಟ್​​ 2ರಿಂದ ಆಗಸ್ಟ್​ 15ರವರೆಗೆ ಈ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕರೆ ನೀಡಿದ್ದಾರೆ. ಆಗಸ್ಟ್​​ 13ರಿಂದ 15ರವರೆಗೆ ಮನೆಯ ಮೇಲೆ 'ಹರ್​ ಘರ್ ತಿರಂಗಾ' ಅಭಿಯಾನದ ಪ್ರಯುಕ್ತ ತ್ರಿವರ್ಣ ಧ್ವಜಾರೋಹಣ ಮಾಡುವಂತೆ ದೇಶವಾಸಿಗಳಿಗೆ ಅವರು ಮನವಿ ಮಾಡಿದ್ದಾರೆ.

ಹರ್​ ಘರ್ ತಿರಂಗಾ ಬದಲಿಗೆ ಹರ್​ ಗಲ್​ ಪೆ ತಿರಂಗಾ ಅಭಿಯಾನ

ಗುಜರಾತ್​​ನಲ್ಲಿ 1 ಕೋಟಿ ಮನೆ ಹಾಗೂ ಕಚೇರಿಗಳಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ. ಇದರ ಅಂಗವಾಗಿ ಜಾವರಚಂದ್ ಮೇಘಾನಿ ಪ್ರಾಥಮಿಕ ಶಾಲೆಯ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೋಸ್ಕರ ಹೊಸ ಕಾರ್ಯಕ್ರಮ ಆಯೋಜನೆಗೊಂಡಿದೆ. ಹರ್ ಘರ್ ತಿರಂಗಾ ಬದಲಿಗೆ ಹರ್​ ಗಲ್​(ಕೆನ್ನೆ) ಪೆ ತಿರಂಗಾ ಅಭಿಯಾನ ಆರಂಭ ಮಾಡಿದೆ. ಇಲ್ಲಿನ ಪ್ರತಿ ಮಕ್ಕಳ ಕೆನ್ನೆ ಮೇಲೆ ಭಾರತದ ತಿರಂಗಾ ಚಿತ್ರ ಬರೆಯಲಾಗ್ತಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳಿಂದ 'ಹರ್​ ಗಲ್​ ಪೆ ತಿರಂಗಾ' ಅಭಿಯಾನ

ಇದನ್ನೂ ಓದಿಿ:ಪ್ರಧಾನಿ ಮೋದಿ ಟ್ವಿಟರ್​, ಇನ್​ಸ್ಟಾ ಡಿಪಿ "ತಿರಂಗಾ"ಮಯ..ಚಿತ್ರ ಬದಲಿಸಲು ಜನರಿಗೂ ಮನವಿ

ABOUT THE AUTHOR

...view details