ನವದೆಹಲಿ: ಹ್ಯಾಕರ್‌ಗಳು ತನ್ನ ಪ್ಲಾಟ್‌ಫಾರ್ಮ್‌ನಿಂದ 100 ಮಿಲಿಯನ್ ಡಾಲರ್ಗಿಂತಲೂ ಅಧಿಕ ಮೌಲ್ಯದ ಕ್ರಿಪ್ಟೊಕರೆನ್ಸಿ ಕದ್ದಿದ್ದಾರೆ ಎಂದು ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಬೈನಾನ್ಸ್ ದೃಢಪಡಿಸಿದೆ.
BNB ಚೈನ್ ಎಂದೂ ಕರೆಯಲ್ಪಡುವ ಬೈನಾನ್ಸ್ ಬ್ಲಾಕ್ಚೈನ್ನಿಂದ ಆರಂಭದಲ್ಲಿ ಹ್ಯಾಕರ್ ಸುಮಾರು 568 ಮಿಲಿಯನ್ ಡಾಲರ್ ಮೌಲ್ಯದ ಒಟ್ಟು 2 ಮಿಲಿಯನ್ BNB ಟೋಕನ್‌ಗಳನ್ನು ಕದ್ದಿದ್ದಾರೆ ಎಂದು ಹೇಳಿದೆ. 100 ಮಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾದ ಬಿಎನ್ಬಿ ಚೈನ್ ಅನ್ನು ಕಂಪನಿಯು ಅಮಾನತುಗೊಳಿಸಿತ್ತು. ಇದರಿಂದಾಗಿ ಉಳಿದ ಟೋಕನ್‌ಗಳನ್ನು ವರ್ಗಾಯಿಸಿಕೊಳ್ಳಲು ಸೈಬರ್ ಅಪರಾಧಿಗಳಿಗೆ ಸಾಧ್ಯವಾಗಲಿಲ್ಲ.
ಕಂಪನಿಗೆ ಆದ ನಷ್ಟ 100 ಮಿಲಿಯನ್ ರಿಂದ 110 ಮಿಲಿಯನ್ ಡಾಲರ್ ಮಧ್ಯದಲ್ಲಿದೆ ಎಂದು ಬೈನಾನ್ಸ್ ಸಿಇಓ ಚಾಂಗ್ಪೆಂಗ್ ಝಾವೊ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು- ವಿಷಯವನ್ನು ಈಗ ನಿಯಂತ್ರಿಸಲಾಗಿದೆ. ನಿಮ್ಮ ಹಣ ಸುರಕ್ಷಿತವಾಗಿದೆ. ಅನಾನುಕೂಲವಾಗಿದ್ದಕ್ಕೆ ಕ್ಷಮೆಕೋರುತ್ತೇವೆ ಮತ್ತು ಮುಂದಿನ ಬೆಳವಣಿಗೆಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿರುತ್ತೇವೆ ಎಂದು ತಿಳಿಸಿದ್ದಾರೆ.