ವಾರಾಣಸಿ (ಉತ್ತರ ಪ್ರದೇಶ):ಕಾಶಿ ಕೋರ್ಟ್ನ ಆದೇಶದಂತೆ ನಿನ್ನೆಯೇ ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇಂದು ಕೋರ್ಟ್ ರಚಿಸಿರುವ ಕೋರ್ಟ್ ಕಮಿಷನರ್ಗಳ ನೇತೃತ್ವದಲ್ಲಿ ರಚನೆಯಾದ ಸರ್ವೇ ಸಮಿತಿ ಇಂದು ತನ್ನ ವರದಿಯನ್ನ ಸ್ಥಳೀಯ ನ್ಯಾಯಾಲಯಕ್ಕೆ ನೀಡಬೇಕಿತ್ತು. ಆದರೆ ಸಮೀಕ್ಷಾ ವರದಿಯನ್ನು ಸಲ್ಲಿಸಲು ನ್ಯಾಯಾಲಯ ನೇಮಿಸಿದ ವಿಶೇಷ ಆಯೋಗ ಮಂಗಳವಾರ ಎರಡು ದಿನಗಳ ಕಾಲಾವಕಾಶ ಕೋರಿದೆ.
ಓರ್ವ ಕಮಿಷನರ್ ವಜಾಗೊಳಿದ ಕೋರ್ಟ್: ಜ್ಞಾನವಾಪಿ ಮಸೀದಿ ಸಂಕೀರ್ಣದ ಆವರಣ ಸಮೀಕ್ಷೆ ಮಾಡಲು ವಾರಾಣಸಿ ಕೋರ್ಟ್ ನೇಮಿಸಿರುವ ತಂಡಕ್ಕೆ ವರದಿ ಸಲ್ಲಿಕೆ ಮಾಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿವಿಲ್ ಕೋರ್ಟ್, ತಾನು ನೇಮಕ ಮಾಡಿರುವ ಮೂವರು ಕಮಿಷನರ್ ಪೈಕಿ ಓರ್ವರನ್ನ ತೆಗೆದು ಹಾಕಿದೆ. ಸಮೀಕ್ಷೆಯ ಮಾಹಿತಿ ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಆರೋಪದ ಮೇಲೆ ಇವರನ್ನ ತೆಗೆದು ಹಾಕಲಾಗಿದ್ದು, ಇದೀಗ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ ಕಮಿಷನರ್ ಆಗಿ ಮುಂದುವರೆಯಲಿದ್ದಾರೆ.
ವರದಿ ಸಲ್ಲಿಸಲು ಸಮಯಾವಕಾಶ ಬೇಕು:ಆಯೋಗದ ವರದಿ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯದ ಸಹಾಯಕ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಜಯ್ ಪ್ರತಾಪ್ ಸಿಂಗ್ ಮಾತನಾಡಿ, ಮೇ 14-16 ರಿಂದ ಮೂರು ದಿನಗಳ ಕಾಲ ಮಸೀದಿಯಲ್ಲಿ ಸಮೀಕ್ಷೆ ನಡೆದಿದ್ದು, ಕೇವಲ 50 ರಷ್ಟು ಮಾತ್ರವೇ ವರದಿ ಸಿದ್ಧವಾಗಿದೆ. ವರದಿ ತಯಾರಿಸಲು ಸಮಯಬೇಕಾಗಿದೆ ಎಂದಿದ್ದಾರೆ. ಹೀಗಾಗಿ ನಾವು ಅದನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿಲ್ಲ. ನಾವು ನ್ಯಾಯಾಲಯದಿಂದ 3-4 ದಿನಗಳ ಕಾಲಾವಕಾಶ ಕೋರುತ್ತೇವೆ ಎಂದು ತಿಳಿಸಿದ್ದರು.