ಕರ್ನಾಟಕ

karnataka

By

Published : Dec 6, 2022, 1:59 PM IST

Updated : Dec 6, 2022, 3:22 PM IST

ETV Bharat / bharat

ಮೋರ್ಬಿ ದುರಂತ.. ಆಕ್ಷೇಪಾರ್ಹ ಟ್ವೀಟ್‌ ಪ್ರಕಟಿಸಿದ್ದಆರೋಪ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ

ಮೋರ್ಬಿ ಸೇತುವೆ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಆರೋಪದಡಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

TMC leader Saket Gokhale
ಟಿಎಂಸಿ ವಕ್ತಾರ ಸಾಕೇತ್ ಗೋಖಲೆ

ಜೈಪುರ:ಮೋರ್ಬಿ ಸೇತುವೆ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಆರೋಪದಡಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್ ಪೊಲೀಸರು ಆತನ ಬಂಧಿಸಲು ಬಹಳ ದಿನಗಳಿಂದ ಶೋಧ ನಡೆಸಿದ್ದರು. ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ತಡರಾತ್ರಿ ಸಾಕೇತ್ ಗೋಖಲೆ ಅವರನ್ನು ಬಂಧಿಸಿ, ಗುಜರಾತ್​ ಅಹಮದಾಬಾದ್​​​​ಗೆ ಕರೆದೊಯ್ದರು.

ಸಾಕೇತ್ ಬಂಧಿಸಿದ್ದು ಹೇಗೆ ?:ಆರೋಪಿ ಸಾಕೇತ್ ಗೋಖಲೆ ದೆಹಲಿಯಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿರುವ ಮಾಹಿತಿ ಅರಿತ ಗುಜರಾತ್ ಪೊಲೀಸರು, ಜೈಪುರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾಕೇತ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಜೈಪುರ ಪೊಲೀಸ್​ರ ಸಹಾಯ ಕೇಳಿದ್ದಾರೆ. ಸಾಕೇತ್ ಗೋಖಲೆ ಬಂದಿಳಿಯುತ್ತಿದ್ದಂತೆ ತಕ್ಷಣ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಮೋರ್ಬಿಯಲ್ಲಿ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕೆಲವು ಆಕ್ಷೇಪಾರ್ಹ ಟ್ವೀಟ್‌ಗಳನ್ನು ಮಾಡಿದ್ದರು. ಅಂದಿನಿಂದ ಗುಜರಾತ್ ಪೊಲೀಸರು ಸಾಕೇತ್​ನನ್ನು ಬಂಧನಕ್ಕೆ ಜಾಲಬೀಸಿದ್ದರು.

ಜೈಪುರ ವಿಮಾನ ನಿಲ್ದಾಣದಲ್ಲಿ ಗುಜರಾತ್ ಪೊಲೀಸರು ಬಂಧಿಸಿದರು. ನಂತರ ಸಾಕೇತ್ ತನ್ನ ಕುಟುಂಬದ ಸದಸ್ಯರಿಗೆ ತಡರಾತ್ರಿ 2 ಗಂಟೆಗೆ ಕರೆ ಮಾಡಿ ಬಂಧಿಸಿರುವ ಬಗ್ಗೆ ತಿಳಿಸಿದ್ದರು.

ಬಂಧನ ಬಳಿಕ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಅವರು ತಮ್ಮ ಟ್ವೀಟ್ ದಲ್ಲಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿರುವುದನ್ನು ಖಚಿತಪಡಿಸಿದ್ದಾರೆ. ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ 135 ಜನರು ಸಾವಿಗೀಡಾಗಿದ್ದರು.

ಇದನ್ನೂಓದಿ:ಉತ್ತರಾಖಂಡದಲ್ಲಿ ಡ್ರೋನ್​ ಮೂಲಕ ಔಷಧ ಸಾಗಣೆ ಸೇವೆ ಆರಂಭ

Last Updated : Dec 6, 2022, 3:22 PM IST

ABOUT THE AUTHOR

...view details