ಕರ್ನಾಟಕ

karnataka

ETV Bharat / bharat

ವರದಕ್ಷಿಣೆ ಹಣ ಪಡೆದು ಲವರ್​ ಜೊತೆ ವರ ಪರಾರಿ: ವಧುವಿನ ಮನೆಯವರು ಕಂಗಾಲು

ವರನೊಬ್ಬ ವರದಕ್ಷಿಣೆ ಹಣದ ಜೊತೆಗೆ ತನ್ನ ಲವರ್​ ಅನ್ನು ಕರೆದುಕೊಂಡು ಮದುವೆ ಹಿಂದಿನ ದಿನ ರಾತ್ರಿ ಎಸ್ಕೇಪ್​ ಆಗಿರುವ ಘಟನೆ ಉತ್ತರ ಪ್ರದೇಶದ ಪೀಲಿಭೀತ್ ನಲ್ಲಿ ನಡೆದಿದೆ.

uttarapradesh
uttarapradesh

By

Published : May 25, 2021, 5:18 PM IST

ಪಿಲಿಭಿತ್​( ಉತ್ತರಪ್ರದೇಶ):ವರದಕ್ಷಿಣೆಯಾಗಿ ಪಡೆದಿದ್ದ ಹಣ ಹಾಗೂ ಬೈಕ್​ ಜೊತೆ ವರನೊಬ್ಬ ವಧುವನ್ನು ಬಿಟ್ಟು ಮದುವೆ ಹಿಂದಿನ ದಿನ ತನ್ನ ಲವರ್​ ಜೊತೆ ಪರಾರಿಯಾದ ಘಟನೆ ನಡೆದಿದೆ.

ಮಜಿಗಾಮ ಗ್ರಾಮದ ಯುವತಿಯೊಬ್ಬಳ ಮದುವೆಯನ್ನು ಶಹಜಹಾನ್ಪುರದ ಚಂದುವಾಪುರ ಗ್ರಾಮದ ರಾಮ ಸ್ವರೂಪ್ ಎಂಬ ಯುವಕನ ಜೊತೆ ನಿರ್ಧರಿಸಲಾಗಿತ್ತು. ಮದುವೆ ಶಾಸ್ತ್ರದಂತೆ ಮೇ 23 ರಂದು ವಧುವಿನ ಕಡೆಯವರು ವರನ ಗ್ರಾಮವನ್ನು ತಲುಪಿ ತಿಲಕ್ ಸಮಾರಂಭ ಮಾಡಿದರು. ಇದರಲ್ಲಿ 51 ಸಾವಿರ ರೂಪಾಯಿ ನಗದು ಸೇರಿದಂತೆ ಬೈಕ್​ ಅನ್ನು ವರನಿಗೆ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು.

ತಿಲಕ್ ಸಮಾರಂಭ ಮುಗಿದ ನಂತರ, ಹುಡುಗಿಯ ಕಡೆಯ ಜನರು ಮನೆಗೆ ವಾಪಸ್​ ಆಗಿದ್ದಾರೆ. ಮತ್ತು ಮೇ 24 ರಂದು ಮದುವೆ ಮಹೂರ್ತ ಹಿನ್ನೆಲೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿತ್ತು. ಅಷ್ಟರಲ್ಲಿ ವರ ರಾಮ್ ​ಸ್ವರೂಪ್​ ವರದಕ್ಷಿಣ ಹಣದ ಜೊತೆಗೆ ತನ್ನ ಲವರ್​ ಅನ್ನು ಕರೆದುಕೊಂಡು ವರದಕ್ಷಿಣೆಯಾಗಿ ಪಡೆಸಿದ್ದ ಬೈಕ್​ನಲ್ಲಿಯೇ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ವಧುವಿನ ಮನೆಯವರು ಹೌಹಾರಿದ್ದು, ವರನ ಮನೆಗೆ ತೆರಳಿ ಜಗಳ ಮಾಡಿ ನಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details