ಕರ್ನಾಟಕ

karnataka

By

Published : Nov 11, 2020, 3:45 PM IST

ETV Bharat / bharat

ಎಲ್​​ಟಿಸಿ ವೋಚರ್​ ಯೋಜನೆಯಡಿ ನೌಕರನ ಕುಟುಂಬಸ್ಥರ ಹೆಸರಲ್ಲೂ ಖರೀದಿಗೆ ಅವಕಾಶ

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ತಮ್ಮ ಆಯ್ಕೆ ಸ್ಥಳಗಳಿಗೆ ಹೋಗಲು ಎಲ್​ಟಿಸಿ ನೀಡುತ್ತಿತ್ತು. ಆದರೆ, ಇದೀಗ ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆ ಘೋಷಣೆ ಮಾಡಿದಲ್ಲದೆ, ನೌಕರನ ಕುಟುಂಬಸ್ಥರ ಹೆಸರಿನಲ್ಲಿಯೂ ಈ ಯೋಜನೆಯ ಲಾಭ ಪಡೆಯಬಹುದು..

Finance Minister Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​

ನವದೆಹಲಿ:ಹಬ್ಬದ ಸಮಯದಲ್ಲಿ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ಮತ್ತೊಮ್ಮೆ ಶುಭಸುದ್ದಿ ನೀಡಿದೆ. ಈ ಹಿಂದೆ ಎಲ್​​​​​ಟಿಸಿ ಯೋಜನೆಯಡಿ ಬಡ್ಡಿ ರಹಿತ ಮುಂಗಡ ಪಾವತಿ ನೀಡಿ, ಎಲ್​​​​​ಟಿಸಿ ವೋಚರ್ ಯೋಜನೆ ಜಾರಿ ಮಾಡಿದ್ದ ಸಚಿವಾಲಯ ಇದೀಗ ಈ ವೋಚರ್​​​​ನಲ್ಲಿ ನೌಕರರ ಸಂಬಂಧಿಕರು ಸಹ ಸರಕು ಮತ್ತು ಸೇವೆ ಸೇರಿ ಇತರೆ ವಸ್ತುಗಳ ಖರೀದಿ ಮಾಡಲು ಅವಕಾಶ ಕಲ್ಪಿಸಿದೆ.

ಎರಡನೇ ಬಾರಿಗೆ ಈ ಯೋಜನೆ ಕುರಿತಂತೆ ಹಲವು ನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರಿಸಿರುವ ಸಚಿವಾಲಯವು, ಈ ಪ್ರಕ್ರಿಯೆಗೆ ಅವಕಾಶ ನೀಡಿದೆ. ಕಳೆದ ಅಕ್ಟೋಬರ್ 12ರಂದು ಕೇಂದ್ರವು ಎಲ್​ಟಿಸಿ ನಗದು ವೋಚರ್ ಯೋಜನೆ ತಂದಿತ್ತು. ಇದರಡಿ ಕೇಂದ್ರ ನೌಕರರು ಶೇ.12ಕ್ಕಿಂತ ಹೆಚ್ಚಿನ ಜಿಎಸ್​ಟಿ ತೆರಿಗೆ ಇರುವ ಯಾವ ಉಸ್ತುವನ್ನಾದರೂ ಖರೀದಿಸಬಹುದಿತ್ತು.

ಇದಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ, ಇಂತಹ ಖರೀದಿಯೂ ಕೇವಲ ಡಿಜಿಟಲ್ ಪಾವತಿ, ಚೆಕ್​ ಅಥವಾ ಆರ್​ಟಿಜಿಎಸ್​​​​, ಡಿಡಿ ಮೂಲಕವೇ ಮಾಡಬೇಕು ಎಂಬ ಷರತ್ತು ವಿಧಿಸಿತ್ತು.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ತಮ್ಮ ಆಯ್ಕೆ ಸ್ಥಳಗಳಿಗೆ ಹೋಗಲು ಎಲ್​ಟಿಸಿ ನೀಡುತ್ತಿತ್ತು. ಆದರೆ, ಇದೀಗ ಉದ್ಯೋಗಿಗಳಿಗೆ 10 ಸಾವಿರ ರೂ. ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆ ಘೋಷಣೆ ಮಾಡಿತ್ತು.

ಆದರೆ, ಎಲ್​ಟಿಸಿ ಅಡಿಯಲ್ಲಿ ನೌಕರನ ಕುಟುಂಬಸ್ಥರು ವಸ್ತುಗಳ ಖರೀದಿ ಮಾಡಬಹುದೇ ಎಂಬ ಪ್ರಶ್ನೆಗಳಿ ಉತ್ತರಿಸಿರುವ ಇಲಾಖೆ, ಯೋಜನೆಯ ಪ್ರಕಾರ ಖರೀದಿಸಿದ ಸರಕು ಮತ್ತು ಸೇವೆಗಳ ರಶೀದಿಗಳು ಸಂಗಾತಿಯ ಅಥವಾ ಎಲ್​ಟಿಸಿ ಶುಲ್ಕಕ್ಕೆ ಅರ್ಹವಾದ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿರಬಹುದು ಎಂದು ತಿಳಿಸಲಾಗಿತ್ತು.

ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂ.ಮುಂಗಡ ದೊರೆಯಲಿದ್ದು, ಮಾ.31, 2021ರವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ ಎಂದು ಹಣಕಾಸು ಇಲಾಖೆ ಸ್ಪಷ್ಟನೆ ನೀಡಿತ್ತು.

ABOUT THE AUTHOR

...view details