ಚಂಡೀಗಢ:ಪಂಜಾಬ್‌ನ ಅಮೃತಸರದಲ್ಲಿರುವ ಐತಿಹಾಸಿಕ ಜಲಿಯನ್‌ವಾಲಾ ಬಾಗ್ ನೋಡಲು ಅನೇಕ ಜನರು ಬರುತ್ತಿದ್ದರು. ಹೀಗೆ ಬಂದವರು ಅಲ್ಲಿರುವ ಹುತಾತ್ಮರ ಬಾವಿಗೆ ನಾಣ್ಯಗಳನ್ನು ಎಸೆಯುತ್ತಿದ್ದರು. ಇದೀಗ ಕೇಂದ್ರ ಸಂಸ್ಕೃತಿ ಸಚಿವಾಲಯವು ಜಲಿಯನ್ ವಾಲಾಬಾಗ್‌ನ ಶಾಹೀದ್ ಬಾವಿಗೆ ಹಣ ಹಾಕುವುದನ್ನು ನಿಷೇಧಿಸಿದೆ. ಅಲ್ಲದೇ ಐತಿಹಾಸಿಕ ಬಾವಿಯ ಮೇಲ್ಭಾಗವನ್ನು ಮುಚ್ಚಲು ಆದೇಶಿಸಿದೆ. ಈ ಹಿಂದೆ ಬಾವಿಯ ಹೊರಗೆ ಸೂಚನಾ ಫಲಕವನ್ನೂ ಹಾಕಲಾಗಿತ್ತು. ಇದರಲ್ಲಿ ನಾಣ್ಯಗಳನ್ನು ಬಾವಿಗೆ ಹಾಕದಂತೆ ಮನವಿ ಮಾಡಲಾಗಿದ್ರೂ, ಪ್ರವಾಸಿಗರು ಹಣ ಹಾಕುತ್ತಿದ್ದರು.
ಭಾರತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರು ಜಲಿಯನ್‌ವಾಲಾ ಬಾಗ್‌ನಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುವಾಗ ಬಾವಿಯನ್ನು ವೀಕ್ಷಿಸುತ್ತಿದ್ದರು ಮತ್ತು ಗೌರವಾರ್ಥವಾಗಿ ನಾಣ್ಯಗಳನ್ನು ಹಾಕುತ್ತಿದ್ದರು. 2019 ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಶತಮಾನೋತ್ಸವದ ಸಂದರ್ಭದಲ್ಲಿ, ಅದನ್ನು ಕೇಂದ್ರ ಸರ್ಕಾರ ನವೀಕರಿಸಿತ್ತು. ಬಳಿಕ ಅದನ್ನು ತೆರೆಯಲಾಯಿತು.