ಕರ್ನಾಟಕ

karnataka

ETV Bharat / bharat

Viral Video: ‘ಚಿಕ್ಕಮಕ್ಕಳಿಗೆ ಯಾಕಿಷ್ಟು ಹೋಂ ವರ್ಕ್‌ ಮೋದಿ ಸಾಬ್​?’

ಲಾಕ್​ಡೌನ್​ನಲ್ಲಿ ಆನ್​ಲೈನ್​ ತರಗತಿಗಳಿಂದ ಪುಟ್ಟ ಮಕ್ಕಳಿಗೆ ಆಗುತ್ತಿರುವ ಕಷ್ಟವನ್ನು ಮುಗ್ಧತೆಯಲ್ಲಿಯೇ ತೆರೆದಿಟ್ಟಿರುವ ಬಾಲಕಿಯ ವಿಡಿಯೋ ಎಲ್ಲರ ಗಮನಸೆಳೆದಿದೆ. 6 ವರ್ಷ ವಯಸ್ಸಿನ ಈ ಬಾಲಕಿ ಪ್ರಧಾನಿ ಮೋದಿ ಅವರನ್ನು ಕೇಳಿರುವ ಈ ಕ್ಯೂಟ್ ಪ್ರಶ್ನೆ, ಇದೀಗ ವೈರಲ್ ಆಗಿದೆ.

Girl's video requesting lesser homework
ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಮನಸೆಳೆದ ಪುಟ್ಟ ಪೋರಿಯ ವಿಡಿಯೋ

By

Published : Jun 1, 2021, 7:33 AM IST

ನವದೆಹಲಿ:ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಮಕ್ಕಳ ಶಿಕ್ಷಣ ಸಂಪೂರ್ಣ ಆನ್‌ಲೈನ್​ನಲ್ಲೇ ನಡೆಯುತ್ತಿದೆ. ಬೆಳಗ್ಗೆದ್ದರೆ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಹಿಡಿದು ತರಗತಿಗೆ ಕೂರುವಂತಾಗಿದೆ. ಆನ್‌ಲೈನ್ ತರಗತಿಗಳಲ್ಲಿರುವ ಅಧಿಕ ಒತ್ತಡದ ಬಗ್ಗೆ ಕಾಶ್ಮೀರದ ಈ ಪುಟ್ಟ ಪೋರಿ ತನ್ನ ಕ್ಯೂಟ್​ ಮಾತುಗಳಿಂದಲೇ ಪ್ರಧಾನಿ ಮೋದಿ ಅವರ ಬಳಿ ದೂರಿದ್ದಾಳೆ. ಪುಟಾಣಿಗಳ ಮೇಲೆ ಶಾಲಾ ಕೆಲಸಗಳ ಹೊರೆಯ ಬಗ್ಗೆ ಪ್ರಧಾನಿಗೆ ಈ ಆರು ವರ್ಷದ ಬಾಲೆ ನೀಡಿದ ದೂರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕ್ರಮಕ್ಕೆ ಮುಂದಾಗುವಲ್ಲಿ ಯಶಸ್ವಿಯಾಗಿದೆ.

ಕಣಿವೆ ರಾಜ್ಯ ಕಾಶ್ಮೀರದ ಈ ಪುಟಾಣಿಯ ಮುದ್ದಾದ ದೂರಿನ ವಿಡಿಯೋವನ್ನು ಔರಂಗಜೇಬ್​ ನಕ್ವಶ್​ಬಂದಿ ಎಂಬ ಪತ್ರಕರ್ತರೊಬ್ಬರು ಹಂಚಿಕೊಂಡಿದ್ದಾರೆ. ದೀರ್ಘಕಾಲದ ಆನ್​ಲೈನ್​ ಕ್ಲಾಸ್​ ಮತ್ತು ಸಾಕಷ್ಟು ಹೋಂ ವರ್ಕ್​ನಿಂದ ಕಷ್ಟ ಅನುಭವಿಸುತ್ತಿರುವುದಾಗಿ ಬಾಲಕಿ ಹೇಳುತ್ತಾಳೆ.

ವಿಡಿಯೋ ನೋಡಿ..

45 ಸೆಕೆಂಡುಗಳ ವಿಡಿಯೋದಲ್ಲಿ, "ನಮಸ್ಕಾರ ಮೋದಿ ಸಾಬ್​. ನಾನು ಆರು ವರ್ಷದ ಬಾಲಕಿ ಈ ವಿಡಿಯೋದಲ್ಲಿ ಮಾತನಾಡುತ್ತಿರುವೆ. ನಿಮಗೆ ನಾನು ಝೂಮ್​ ಕ್ಲಾಸ್​ ಬಗ್ಗೆ ಹೇಳಲಿದ್ದೇನೆ. ಚಿಕ್ಕ ಮಕ್ಕಳು ಇರುತ್ತಾರಲ್ಲ, ಆರು ವರ್ಷ ವಯಸ್ಸಿನವರು ಅವರಿಗೆ ಮೇಡಮ್​/ಸರ್​ ಯಾಕೆ ಹೆಚ್ಚು ಕೆಲಸ ಕೊಡುತ್ತಾರೆ? ಇಷ್ಟು ಕೆಲಸ ದೊಡ್ಡ ಮಕ್ಕಳಿಗೆ ಇರುತ್ತದೆ. ನನಗೆ ಆನ್‌ಲೈನ್ ಕ್ಲಾಸ್‌ ಬೆಳಗ್ಗೆ 10 ಗಂಟೆಗೆ ಶುರುವಾಗುತ್ತೆ. ಅದು ಮುಗಿಯೋದು ಮಧ್ಯಾಹ್ನ 2 ಗಂಟೆಗೆ. ಮೊದಲು ಇಂಗ್ಲಿಷ್ ನಂತರ ಗಣಿತ, ಉರ್ದು ಬಳಿಕ ಇವಿಎಸ್​ ಜೊತೆಗೆ ಕಂಪ್ಯೂಟರ್​ ಕ್ಲಾಸ್​. ಇಷ್ಟೊಂದು ಕೆಲಸ 6, 7, 10 ನೇ ತರಗತಿ ಮಕ್ಕಳಿಗೆ ಇರುತ್ತದೆ. ಜೊತೆಗೆ ಹೋಂ ವರ್ಕ್​ ಹೊರೆ, ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸ ಏಕೆ ಮೋದಿ ಸಾಬ್‌?" ಎಂದು ಬಾಲಕಿ ತನ್ನ ತೊದಲು ನುಡಿಯಲ್ಲೇ ಪ್ರಶ್ನಿಸಿದಳು.

48 ಗಂಟೆಗಳೊಳಗೆ ನೀತಿ ರೂಪಿಸುವಂತೆ ಲೆ.ಗವರ್ನರ್ ಸಿನ್ಹಾ ಆದೇಶ:

ಈ ವಿಡಿಯೋ ನೋಡಿ ತಕ್ಷಣ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಶಾಲಾ ಮಕ್ಕಳ ಮೇಲೆ ಹೋಂ ವರ್ಕ್​ ಹೊರೆ ಕಡಿಮೆ ಮಾಡಲು 48 ಗಂಟೆಗಳ ಒಳಗೆ ನೀತಿ ರೂಪಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ನೆಟ್ಟಿಗರ ಮನಸೆಳೆದ ವಿಡಿಯೋ:

ಶನಿವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೊ ಕ್ಲಿಪ್‌ ಅನ್ನು 57,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸುಮಾರು 1,200ಕ್ಕೂ ಹೆಚ್ಚು ಬಳಕೆದಾರರು ವಿಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ. ಇನ್ನೂ ಅನೇಕರು ಆಕೆಯ ದೂರಿಗೆ ಪ್ರತಿಕ್ರಿಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details