ಮಂಗಳೂರು: ಪರಿಚಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಮಂಗಳೂರಿನ ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಗರದ ಹೊರವಲಯದ ಇಡ್ಯಾ ನಿವಾಸಿಯಾಗಿರುವ ಯುವಕನಿಗೆ 19 ವಯಸ್ಸಾಗಿದ್ದು, ಪರಿಚಯವಾಗಿದ್ದ 14 ವರ್ಷದ ಬಾಲಕಿ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ.
ಮಂಗಳೂರು: ಪರಿಚಿತ ಬಾಲಕಿ ಮೇಲೆ ಯುವಕನಿಂದ ಅತ್ಯಾಚಾರ - ಮಂಗಳೂರು ಬಾಲಕಿ ಅತ್ಯಾಚಾರ
ಪರಿಚಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಪರಿಚಿತ ಬಾಲಕಿ ಮೇಲೆ ಯುವಕನಿಂದ ಅತ್ಯಾಚಾರ
ಓದಿ:ದೆಹಲಿ ಸಿಎಂ ಕ್ಷಮೆ ಕೇಳಬೇಕು..ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಕೆ: ತೇಜಸ್ವಿ ಸೂರ್ಯ
ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.