ನವದೆಹಲಿ:ಮನೆಪಾಠ(ಹೋಮ್ವರ್ಕ್) ಮಾಡಲಿಲ್ಲ ಎಂಬ ಕಾರಣಕ್ಕಾಗಿ ಪೋಷಕರು 5 ವರ್ಷದ ಬಾಲಕಿಯನ್ನು ಕೈ ಕಾಲು ಕಟ್ಟಿ ಮನೆಯ ಛಾವಣಿಯ ಮೇಲೆ ಉರಿಬಿಸಿಲಿನಲ್ಲಿ ಬಿಸಾಡಿ ವಿಕೃತಿ ಮೆರೆದಿದ್ದಾರೆ. ದೆಹಲಿಯ ಕರವಾಲ್ ನಗರದ ತುಖ್ಮೀರ್‌ಪುರದಲ್ಲಿ ಮನಕಲಕುವ ಘಟನೆ ನಡೆದಿದೆ.
1ನೇ ತರಗತಿ ಓದುತ್ತಿರುವ ಬಾಲಕಿ ಬಿಸಿಲಿನಲ್ಲಿ ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗಮನಿಸಿದ ದೆಹಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.