ಪೆನ್ (ಮಹಾರಾಷ್ಟ್ರ):ಬ್ಲ್ಯಾಕ್ಮೇಲ್ ಮಾಡಿ ಹೆದರಿಸಿ, ಬೆದರಿಸಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಮಹಾರಾಷ್ಟ್ರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.
ಕಾಮುಕರ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್ 376, 4, 8, 7, 12 ರ ಅಡಿಯಲ್ಲಿ ವಡ್ಖಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಏಳು ಜನ ಆರೋಪಿಗಳು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಪೆನ್ನ ತಹಶಿಲ್ ವ್ಯಾಪ್ತಿಯ ನಿವಾಸಿಯಾಗಿದ್ದ 17 ವರ್ಷದ ಬಾಲಕಿ ಯಾವುದೋ ಕಾರ್ಯಕ್ರಮ ನಿಮಿತ್ತ ಪಕ್ಕದ ಹಳ್ಳಿಗೆ ಹೋಗಿದ್ದಳು. ಅಲ್ಲಿ ಆಕೆಗೆ ಇಬ್ಬರು ಹುಡುಗರ ಪರಿಚಯವಾಗಿತ್ತು.
ಇದನ್ನೂ ಓದಿ:ಪುಲ್ವಾಮಾ ಎನ್ಕೌಂಟರ್ : ನಾಲ್ವರು ಭಯೋತ್ಪಾದಕರನ್ನ ಸದೆಬಡಿದ ಐಎಎಫ್ ವಿಶೇಷ ಪಡೆ