ಹೈದರಾಬಾದ್:ಕಾರಿನ ಬಾಡಿಗೆ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಚಾಲಕನ ಮೇಲೆ ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ಗಳಿಂದ ಮಾರಣಾಂತಿಕ ಹಲ್ಲೆ ಮಾಡಿಸಿದ ಘಟನೆ ತೆಲಂಗಾಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಾರಾಯಣಖೇಡ್ನ ವೆಂಕಟೇಶ್(27) ಗಂಭೀರ ಗಾಯಗೊಂಡ ಚಾಲಕ. ಉಪ್ಪರ್ಪಲ್ಲಿಯ ವಿವೇಕ್ ರೆಡ್ಡಿ (26) ಹಲ್ಲೆ ಮಾಡಿದ ಆರೋಪಿ.
ಜುಲೈ 31 ರಂದು ಈ ಘಟನೆ ನಡೆದಿದ. ವಿವೇಖ್ರೆಡ್ಡಿ ಮನೆಗೆ ತೆರಳಲು ಕಾರು ಬುಕ್ ಮಾಡಿದ್ದ. ನಿಗದಿತ ಸ್ಥಳ ತಲುಪಿದ ಬಳಿಕ 600 ರೂ. ಬಾಡಿಗೆ ಹಣ ನೀಡದೇ ಹೊರಟಿದ್ದ. ಇದನ್ನು ಕೇಳಿದ ಕಾರು ಚಾಲಕ ವೆಂಕಟೇಶ್ ಜೊತೆ ಕಾದಾಟಕ್ಕಿಳಿದ್ದಾನೆ.
ಬಳಿಕ ತನ್ನ ಸ್ನೇಹಿತರನ್ನು ಕರೆಯಿಸಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ಗಳಿಂದ ವೆಂಕಟೇಶ್ನನ್ನು ಥಳಿಸಿದ್ದಾರೆ. ಬಲವಾಗಿ ತಲೆಗೆ ಹೊಡೆದಿದ್ದರಿಂದ ಚಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕಾರು ಮಾಲೀಕನನ್ನೂ ವಿವೇಕ್ರೆಡ್ಡಿ ಗ್ಯಾಂಗ್ ಥಳಿಸಿದೆ. ಮರುದಿನ ತಮ್ಮ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಕೋರ ವಿವೇಕ್ರೆಡ್ಡಿ ದೂರು ನೀಡಿದ್ದಾನೆ.