ಕರ್ನಾಟಕ

karnataka

ETV Bharat / bharat

17 ವರ್ಷದ ಬಾಲಕನನ್ನು ವರಿಸಿದ 19ರ ಯುವತಿ ವಿರುದ್ಧ ಪೊಕ್ಸೊ ಕೇಸ್​ - Tamilnadu

17 ವರ್ಷದ ಅಪ್ರಾಪ್ತನನ್ನು ಯುವತಿ ಬಲವಂತದಿಂದ ವಿವಾಹವಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

17 ವರ್ಷದ ಬಾಲಕನನ್ನು ಬಲವಂತದಿಂದ ವರಿಸಿದ 19ರ ಯುವತಿ
17 ವರ್ಷದ ಬಾಲಕನನ್ನು ಬಲವಂತದಿಂದ ವರಿಸಿದ 19ರ ಯುವತಿ

By

Published : Aug 29, 2021, 10:08 PM IST

ಕೊಯಮತ್ತೂರು (ತಮಿಳುನಾಡು): 19 ವರ್ಷದ ಯುವತಿ 17 ವರ್ಷದ ಬಾಲಕನನ್ನು ಪ್ರೇಮಿಸಿ ಮದುವೆಯಾಗಿರುವ ಘಟನೆ ಜಿಲ್ಲೆಯ ಪೊಲ್ಲಾಚಿಯಲ್ಲಿ ನಡೆದಿದೆ.

ಯುವತಿ ಹಾಗೂ ಬಾಲಕ ಪೆಟ್ರೋಲ್​ ಬಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊದಮೊದಲಿಗೆ ಇಬ್ಬರ ನಡುವಿದ್ದ ಸ್ನೇಹ, ಬಳಿಕ ಪ್ರೀತಿಗೆ ತಿರುಗಿತು. ಇದೇ ಸಮಯದಲ್ಲಿ ಅಪ್ರಾಪ್ತ, ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ. ಯೋಗ ಕ್ಷೇಮ ವಿಚಾರಿಸಲು ಹೋದ ಯುವತಿಯು, ನನ್ನ ಪೋಷಕರು ಮದುವೆಗೆ ಒತ್ತಾಯಿಸುತ್ತಿದ್ದಾರೆ ಎಂದು ಬಾಲಕನಿಗೆ ಹೇಳಿದ್ದಾಳೆ.

ಇಬ್ಬರೂ ಮಾತುಕತೆ ನಡೆಸಿ, ಯುವತಿಯು ಬಾಲಕನನ್ನು ಪೊಲ್ಲಾಚಿ ಬಳಿಯಿರುವ ದೇಗುಲಕ್ಕೆ ಕರೆದೊಯ್ದು ಮದುವೆಯಾಗಿದ್ದಾಳೆ. ನಂತರ ಹುಡುಗನ ಪೋಷಕರಿಗೆ ವಿಷಯ ತಿಳಿದು ಪೊಲ್ಲಾಚಿ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಯುವತಿಯೇ ಬಲವಂತದಿಂದ ಬಾಲಕನನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Video: ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರಗೀತೆ ಹಾಡಿದ ಐದರ ಬಾಲೆಗೆ ಸಿಎಂ ಶ್ಲಾಘನೆ

ಸದ್ಯ ಕೊಯಮತ್ತೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆ, ಪೊಕ್ಸೊ ಕಾಯ್ದೆಯಡಿ ಯುವತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ABOUT THE AUTHOR

...view details