ಕರ್ನಾಟಕ

karnataka

ETV Bharat / bharat

ಎಲ್ಲರಿಗೂ ಉಚಿತ ವ್ಯಾಕ್ಸಿನ್, ಪಡಿತರ ವಿತರಣೆ: ಕೇಂದ್ರ ಸರ್ಕಾರಕ್ಕಾಗುವ ಹೊರೆ ಎಷ್ಟು ಗೊತ್ತಾ?

ನವೆಂಬರ್​ವರೆಗೆ ಸುಮಾರು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆಜಿ ಬೇಳೆ ನೀಡಲು ನಿರ್ಧರಿಸಿರುವುದರಿಂದ 1.1 ಲಕ್ಷ ಕೋಟಿಯಿಂದ 1.3 ಲಕ್ಷ ಕೋಟಿ ರೂಪಾಯಿ ಬೇಕಾಗುತ್ತದೆ. ಇವೆಲ್ಲದರ ಹೆಚ್ಚುವರಿಯಾಗಿ 1.45 ಲಕ್ಷ ಕೋಟಿ ರೂಪಾಯಿ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ತಿಳಿದುಬಂದಿದೆ.

PM Modi
ಪ್ರಧಾನಿ ಮೋದಿ

By

Published : Jun 8, 2021, 7:38 PM IST

ನವದೆಹಲಿ:ಕೋವಿಡ್​ 2 ನೇ ಅಲೆಯಿಂದ ಸಂಕಷ್ಟಕ್ಕೊಳಗಾದ ಜನತೆಗೆ ವ್ಯಾಕ್ಸಿನ್ ಹಾಗೂ ಆಹಾರ ಧಾನ್ಯಗಳನ್ನು ಒದಗಿಸಲು ಸರ್ಕಾರವು ಹೆಚ್ಚುವರಿಯಾಗಿ 1.45 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಕೇಂದ್ರ ಸರ್ಕಾರ ಬಜೆಟ್​​ನಲ್ಲಿ ಎಲ್ಲಾ ವಯಸ್ಕರಿಗೆ ಉಚಿತ ವ್ಯಾಕ್ಸಿನ್ ನೀಡಲು 35 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಅಭಿಯಾನ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 15 ಸಾವಿರದಿಂದ 20 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ನವೆಂಬರ್​ವರೆಗೆ ಸುಮಾರು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆಜಿ ಬೇಳೆ ನೀಡಲು ನಿರ್ಧರಿಸಿರುವುದರಿಂದ 1.1 ಲಕ್ಷ ಕೋಟಿಯಿಂದ 1.3 ಲಕ್ಷ ಕೋಟಿ ರೂಪಾಯಿ ಬೇಕಾಗುತ್ತದೆ. ಇವೆಲ್ಲದರ ಹೆಚ್ಚುವರಿಯಾಗಿ 1.45 ಲಕ್ಷ ಕೋಟಿ ರೂಪಾಯಿ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ತಿಳಿದುಬಂದಿದೆ.

ಜೂನ್ 21 ರಿಂದ ಎಲ್ಲಾ ವಯೋಮಾನದವರಿಗೆ ಉಚಿತ ವ್ಯಾಕ್ಸಿನ್ ನೀಡುವುದಾಗಿ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಜೂನ್​ನಲ್ಲಿ ಅಂತ್ಯಗೊಳ್ಳಬೇಕಿದ್ದ ಉಚಿತ ಆಹಾರ ಧಾನ್ಯ ಯೋಜನೆ ನವೆಂಬರ್​ವರೆ​ಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ:ಕೋವಿಶೀಲ್ಡ್​​ , ಕೋವ್ಯಾಕ್ಸಿನ್‌ನ 44 ಕೋಟಿ ಡೋಸ್‌ಗಳಿಗೆ ಆರ್ಡರ್​ ಮಾಡಿದ ಕೇಂದ್ರ !

ಆರ್​ಬಿಐ ನಿರೀಕ್ಷೆಗಿಂತ ಹೆಚ್ಚಾದ 99,122 ಕೋಟಿ ರೂ.ಗಳ ಲಾಭಾಂಶ ಮತ್ತು ತೈಲಗಳ ಮೇಲಿನ ದಾಖಲೆಯ ತೆರಿಗೆಯಿಂದ ಇವೆಲ್ಲ ವೆಚ್ಚಗಳನ್ನು ನಿಭಾಯಿಸುವ ಸಾಧ್ಯತೆಯಿದೆ.

ABOUT THE AUTHOR

...view details