ಹೈದರಾಬಾದ್ (ತೆಲಂಗಾಣ): ಇತ್ತೀಚೆಗೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಯಾರದ್ದೋ ಫೋಟೋ ಬಳಸಿ, ಅವರ ಹೆಸರ ಮೇಲೆ ಹಣ ವಸೂಲಿ ಮಾಡುವುದು ದಂಧೆಯಾಗಿ ಮಾರ್ಪಟ್ಟಿದೆ. ಆದರೆ, ಇಲ್ಲಿ ಒಬ್ಬ ರಾಜ್ಯದ ಡಿಜಿಪಿ ಹೆಸರಲ್ಲೇ ಮೋಸ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೌದು, ತೆಲಂಗಾಣದ ಡಿಜಿಪಿ ಮಹೇಂದ್ರರೆಡ್ಡಿ ಅವರ ಫೋಟೋವನ್ನೇ ವಾಟ್ಸ್‌ಆ್ಯಪ್ ಡಿಪಿಯಾಗಿ ಬಳಸಿ ವಂಚನೆಗೆ ಸಂಚು ಹಾಕಿರುವುದು ಬಯಲಿಗೆ ಬಂದಿದೆ. ಡಿಜಿಪಿ ಫೋಟೋ ಡಿಪಿಯಾಗಿಟ್ಟ ಕಾರಣ ಕೆಲವರು ಹಣ ಕೊಟ್ಟು ಮೋಸ ಹೋಗಿದ್ದನ್ನು ಗುರುತಿಸಲಾಗಿದೆ ಎಂದು ಸೆಂಟ್ರಲ್ ಕ್ರೈಂ ಸ್ಪೇಷನ್ ಜಂಟಿ ಕಮಿಷನರ್ ಗಜರಾವು ಭೂಪಾಲ್ ತಿಳಿಸಿದ್ದಾರೆ.