ಕರ್ನಾಟಕ

karnataka

ETV Bharat / bharat

ಸ್ನಾಪ್ ಡೀಲ್ ಹೆಸರಲ್ಲಿ ಉದ್ಯೋಗಿಗೆ ಐದು ಲಕ್ಷ ರೂ. ಪಂಗನಾಮ ಹಾಕಿದ ದುಷ್ಕರ್ಮಿಗಳ ಗ್ಯಾಂಗ್! - ಸ್ನಾಪ್ ಡೀಲ್

ಇತ್ತೀಚಿನ ದಿನಗಳಲ್ಲಿ ನಕಲಿ ಆ್ಯಪ್​ಗಳಿಂದ ಮೋಸ ಹೋಗುವವರ ಸಂಖ್ಯೆ ಅಷ್ಟಿಷ್ಟಲ್ಲ. ಅದೇ ರೀತಿಯ ಮೋಸದ ಜಾಲಕ್ಕೆ ವ್ಯಕ್ತಿಯೊಬ್ಬ ಸಿಲುಕಿ ಐದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

Snapdeal
Snapdeal

By

Published : Oct 9, 2021, 4:02 PM IST

ಪೆರಂಬೂರು (ತಮಿಳುನಾಡು): ಸ್ನಾಪ್ ಡೀಲ್ ಹೆಸರಲ್ಲಿ ದುಷ್ಕರ್ಮಿಗಳು ನಗರದ ಉದ್ಯೋಗಿ ವಿನೋದ್ ಎಂಬುವರಿಗೆ ಐದು ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಿನೋದ್ ಪ್ರಕಾರ, ಅವರು ಕೆಲ ದಿನಗಳ ಹಿಂದೆ ಕೆಲವು ವಸ್ತುಗಳನ್ನು ಖರೀದಿಸಲು ಸ್ನ್ಯಾಪ್ ಡೀಲ್​ನಲ್ಲಿ ನೊಂದಾಯಿಸಿಕೊಂಡಿದ್ದರು. ಆದರೆ, ಅದು ನಕಲಿ ವೆಬ್​ಸೈಟ್ ಎಂದು ಅವರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ನಂತರ ಇ - ಕಾಮರ್ಸ್ ಪೋರ್ಟಲ್​ನಿಂದ ಒಂದು ಜತೆ ಶೂ ಗಿಫ್ಟ್ ಸಿಕ್ಕಿತು. ಮರುದಿನವೇ ಕಿಡಿಗೇಡಿಗಳ ತಂಡ ವಿನೋದ್​ಗೆ 18 ಲಕ್ಷ ರೂಪಾಯಿ ಚೆಕ್​ ಕಳಿಸಿತು. ಚೆಕ್​ನಿಂದ ಹಣ ಪಡೆಯಲು ಮೊದಲು ಐದು ಲಕ್ಷ ರೂಪಾಯಿ ಪಾವತಿಸಬೇಕು ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಅವರು ಐದು ಲಕ್ಷ ರೂಪಾಯಿಗಳನ್ನು ವಂಚಕರು ಹೇಳಿದ ಅಡ್ರೆಸ್​​ಗೆ ಕಳಿಸಿದ್ರು.

ಆದರೆ, ಕೆಲ ದಿನಗಳ ಬಳಿಕ ವಿನೋದ್​ಗೆ ಈ ರೀತಿಯ ವಂಚನೆ ಪ್ರಕರಣಗಳು ಆತನ ಸ್ನೇಹಿತನಿಂದ ತಿಳಿಯಿತು. ಕೂಡಲೇ ಅವರು, ಓಟರಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಪೊಲೀಸರ ಆರಂಭಿಕ ತನಿಖೆಯಲ್ಲಿ ಈ ತಂಡವು ದೆಹಲಿಯಿಂದ ಬಂದಿದ್ದು, ಇದೇ ರೀತಿ ಅನೇಕರಿಗೆ ವಂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹೆಟೆರೊ ಡ್ರಗ್ಸ್​ ಕಂಪನಿ ಮೇಲೆ IT ದಾಳಿ.. 142 ಕೋಟಿ ರೂ. ನಗದು, 550 ಕೋಟಿ ಲೆಕ್ಕವಿಲ್ಲದ ಆದಾಯ ಪತ್ತೆ!

ವಿನೋದ್ ಇಂದು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದು, ಈ ರೀತಿಯ ವಂಚನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರು.

ABOUT THE AUTHOR

...view details