ನವದೆಹಲಿ: ಕಾಶ್ಮೀರದ ಭದ್ರತೆಗೆ ಸಂಬಂಧಿಸಿದಂತೆ ಚೀನಾ ಯಾವುದೇ ಆಟಗಳನ್ನು ಆಡಲು ಫ್ರಾನ್ಸ್ ಅವಕಾಶ ನೀಡಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ರಾಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೋನ್ ಹೇಳಿದ್ದಾರೆ.
ನಾವು ಭದ್ರತಾ ವಿಷಯದಲ್ಲಿ ಭಾರತವನ್ನು ಬೆಂಬಲಿಸುತ್ತಿದ್ದೇವೆ. ನಾವು ಯಾವುದೇ ರೀತಿಯ ಆಟಗಳನ್ನು ಆಡಲು ಚೀನಿಯರಿಗೆ ಅವಕಾಶ ನೀಡಿಲ್ಲ. ಹಿಮಾಲಯದ ವಿಷಯಕ್ಕೆ ಬಂದಾಗ, ನಮ್ಮ ಹೇಳಿಕೆಗಳನ್ನು ಪರಿಶೀಲಿಸಿ. ಅವು ಸಂಪೂರ್ಣವಾಗಿ ಸ್ಪಷ್ಟವಾಗಿವೆ. ಇದರಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ ಎಂದು ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸಬೇಕು. ಇತರ ರಾಷ್ಟ್ರಗಳಿಗೆ ಕಡಿಮೆ ಆಕ್ರಮಣಕಾರಿಯಾಗಿರಬೇಕು. ಚೀನಾ ಕೆಲವು ನಿಯಮಗಳನ್ನು ಗೌರವಿಸಬೇಕೆಂದು ನಾವು ಬಯಸುತ್ತೇವೆ. ಚೀನಾ ಕಡಿಮೆ ಆಕ್ರಮಣಕಾರಿಯಾಗಬೇಕು. ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸಿದ್ಧರಿದ್ದೇವೆ ಮತ್ತು ಸಮರ್ಥರಾಗಿದ್ದೇವೆ ಎಂದು ಚೀನಾ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.