ಜಗಿತ್ಯಾಲ: ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಇಲ್ಲಿನ ವೆಂಕಟಾಪೂರ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ದುಬೈ ಪ್ರಯಾಣ
ದುಬೈಗೆ ಕಳುಹಿಸಲು ಹೋಗಿ ಮೃತ್ಯುಕೂಪ ಸೇರಿದ ನಾಲ್ವರು ಜಿಲ್ಲೆಯ ಮಲ್ಲಾಪುರ ಗ್ರಾಮದ ನಿವಾಸಿ ಶ್ರೀನಿವಾಸ್ ತನ್ನ ಬಾಮೈದ ಚಂದ್ರಮೋಹನ್ನನ್ನು ದುಬೈಗೆ ಕಳುಹಿಸಲು ತನ್ನ ಮತ್ತು ಚಂದ್ರಮೋಹನ್ ಪರಿವಾರ ಸೇರಿದಂತೆ ಕಾರಿನಲ್ಲಿ ಏಳು ಜನರು ಜಗಿತ್ಯಾಲ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಚಂದ್ರಮೋಹನ್ನನ್ನು ಬಸ್ ಹತ್ತಿಸಿ ಶ್ರೀನಿವಾಸ್ ಮತ್ತು ಚಂದ್ರ ಮೋಹನ್ ಕುಟಂಬಗಳು ವಾಪಸ್ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.
ಭೀಕರ ರಸ್ತೆ ಅಪಘಾತ
ಎರಡು ಕುಟುಂಬಗಳು ವಾಪಸ್ ಆಗುತ್ತಿದ್ದ ವೇಳೆ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಚಂದ್ರಮೋಹನ್ ಪತ್ನಿ, ಮಗು ಮತ್ತು ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗುವೊಂದನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದೆ.
ಕುಸಿದು ಬಿದ್ದ ಚಂದ್ರಮೋಹನ್
ಅಪಘಾತ ಮಗು, ಹೆಂಡ್ತಿ ಮತ್ತು ಸಹೋದರಿ ಸಾವಿನ ಸುದ್ದಿ ಕೇಳಿದ ಚಂದ್ರಮೋಹನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರು ತಮ್ಮ ಗ್ರಾಮಕ್ಕೆ ವಾಪಸಾಗಿದ್ದಾರೆ.
ಮೂವರಿಗೆ ಗಾಯ
ಅಪಘಾತದ ಸಮಯದಲ್ಲಿ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಪೊಲೀಸರು ಹೇಳಿದ್ದೇನು?
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ‘ವೇಗವಾಗಿ ಚಲಿಸುತ್ತಿದ್ದ ಕಾರಿನ ಚಾಲಕ ಎದುರಿಗೆ ನಿಂತಿದ್ದ ಲಾರಿಯನ್ನು ಗಮನಿಸದೇ ಇರುವುದರಿಂದ ಈ ಅಪಘಾತ ಸಂಭವಿಸಿದ್ದಾಗಿ ಶಂಕಿಸಲಾಗಿದೆ. ಈ ಘಟನೆಯಲ್ಲಿ ಎರಡು ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಐ ಚಂದ್ರಶೇಖರ ರಾಜು ಹೇಳಿದರು.
ಪ್ರಕರಣ ದಾಖಲು
ಈ ಘಟನೆ ಕುರಿತು ಕೋರುಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ .