ಕರ್ನಾಟಕ

karnataka

ETV Bharat / bharat

ಸೋನಿಪತ್‌ನಲ್ಲಿ ನಕಲಿ ಮದ್ಯ ಸೇವಿಸಿ ನಾಲ್ವರು ಮೃತ - ಸದರ್ ಠಾಣೆ ಪೊಲೀಸರು

ಹರಿಯಾಣದ ಸೋನಿಪತ್‌ನಲ್ಲಿ ಮದ್ಯ ಸೇವಿಸಿ ಶಾಮ್ದಿ ಮತ್ತು ಬುದ್‌ಶಾಮ್‌ನ ನಾಲ್ವರು ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಐವರೂ ಪಾಣಿಪತ್​ನಲ್ಲಿ ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ.

ಸೋನಿಪತ್‌
ಸೋನಿಪತ್‌

By

Published : Nov 22, 2022, 4:38 PM IST

ಸೋನಿಪತ್(ಹರಿಯಾಣ): ನಕಲಿ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಹರಿಯಾಣದ ಸೋನಿಪತ್ ಜಿಲ್ಲೆಯ ಗೊಹಾನಾ ಗ್ರಾಮದಲ್ಲಿ ನಡೆದಿದೆ.

ಮೃತರಲ್ಲಿ ಮೂವರು ಶಮ್ದಿ ಗ್ರಾಮದ ನಿವಾಸಿಗಳಾಗಿದ್ದರೆ, ನಾಲ್ಕನೇಯವರು ಪಾಣಿಪತ್‌ನ ಬುದ್‌ಶಾಮ್ ಗ್ರಾಮದವರು ಎಂಬುದು ತಿಳಿದುಬಂದಿದೆ. ವಿಷಯ ತಿಳಿದ ಸದರ್ ಗೋಹಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಸಿ ಸಾರಾಯಿ ಕುಡಿದು ಸಾವನ್ನಪ್ಪಿರುವ ವಿಷಯ ಬಯಲಿಗೆ ಬರುತ್ತಿದೆ. ಗ್ರಾಮಸ್ಥರು ಎಲ್ಲಿಂದ ಮದ್ಯ ತಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮಾಹಿತಿ ಪ್ರಕಾರ, ಬಂಟಿ ಮತ್ತು ಅಜಯ್ ಅವರ ಸಂಬಂಧಿಕರಾದ ಶಾಮ್ಡಿ ಗ್ರಾಮದ ನಿವಾಸಿಗಳಾದ ಸುರೇಂದ್ರ (35), ಸುನಿಲ್ (30), ಅಜಯ್ (31), ಬುಡ್ಶಾಮ್ ಗ್ರಾಮದ ಅನಿಲ್ (32) ಭಾನುವಾರ ಒಟ್ಟಿಗೆ ಮದ್ಯ ಸೇವಿಸಿದ್ದರು. ಅವರಲ್ಲಿ ಸುನೀಲ್, ಅಜಯ್ ಮತ್ತು ಅವರ ಸಂಬಂಧಿ ಪಾಣಿಪತ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸಗಾರರಾಗಿದ್ದರು.

ಐವರೂ ಅಲ್ಲಿಯೇ ಮದ್ಯ ಸೇವಿಸಿದ್ದು, ಬಳಿಕ ಬುದ್‌ಶಾಮ್‌ ಗ್ರಾಮದ ಅನಿಲ್‌ ಎಂಬುವವರ ಮನೆಗೆ ತೆರಳಿದ್ದಾರೆ. ಸೋಮವಾರ ದಿಢೀರ್ ಆರೋಗ್ಯ ಹದಗೆಟ್ಟ ಕಾರಣ ಅನಿಲ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಮವಾರ ತಡರಾತ್ರಿ ಸುರೇಂದ್ರ, ಸುನೀಲ್, ಅಜಯ್ ಮತ್ತು ಬಂಟಿ ಅವರ ಆರೋಗ್ಯವೂ ಹದಗೆಟ್ಟಿತ್ತು. ಇದರಿಂದ ಮೂವರಿಗೂ ವಾಂತಿಯಾಗತೊಡಗಿದೆ.

ಅವರನ್ನು ಖಾನ್ಪುರದ ಭಗತ್ ಫೂಲ್ ಸಿಂಗ್ ಸರ್ಕಾರಿ ಮಹಿಳಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ವೇಳೆ ಅಜಯ್ ಮೃತಪಟ್ಟಿದ್ದಾರೆ. ಸುರೇಂದ್ರ ಮತ್ತು ಸುನಿಲ್ ಅವರನ್ನು ರೋಹ್ಟಕ್ ಪಿಜಿಐಗೆ ಉಲ್ಲೇಖಿಸಲಾಗಿದೆ. ಅಲ್ಲಿ ಚಿಕಿತ್ಸೆ ವೇಳೆ ಆತನೂ ಸಾವನ್ನಪ್ಪಿದ್ದಾನೆ. ನಾಲ್ವರು ಒಟ್ಟಿಗೆ ಸಾವನ್ನಪ್ಪಿದ್ದರಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸದರ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. ಸೋನಿಪತ್‌ನಲ್ಲಿ ಗ್ರಾಮಸ್ಥರು ನಕಲಿ ಮದ್ಯ ಸೇವಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಮದ್ಯವನ್ನು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಸುರೇಂದ್ರ ಗ್ರಾಮದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅವರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಸುನೀಲ್, ಅಜಯ್ ಮತ್ತು ಅವರ ಸಂಬಂಧಿ ಅನಿಲ್ ಅವರಿಗೆ ತಲಾ ಇಬ್ಬರು ಗಂಡು ಮಕ್ಕಳಿದ್ದಾರೆ. ಮೂವರೂ ಪಾಣಿಪತ್ ಸಕ್ಕರೆ ಕಾರ್ಖಾನೆಯ ಉದ್ಯೋಗಿಗಳಾಗಿದ್ದರು. ಸುರೇಂದ್ರನ ಕಿರಿಯ ಸಹೋದರ ಗ್ರಾಮದ ಸರಪಂಚ್ ಆಗಿದ್ದಾನೆ ಎಂಬುದು ತಿಳಿದು ಬಂದಿದೆ.

ಓದಿ:ಕುಡುಕ ಕೋತಿಯ ಕಾಟಕ್ಕೆ ಬೇಸತ್ತ ಮದ್ಯದ ಅಂಗಡಿ ಮಾಲೀಕರು!

ABOUT THE AUTHOR

...view details