ಕರ್ನಾಟಕ

karnataka

By

Published : Mar 6, 2021, 1:14 PM IST

ETV Bharat / bharat

ದೀದಿಗೆ ಕೈಕೊಟ್ಟು ಬಿಜೆಪಿ ಸೇರಿದ ಟಿಎಂಸಿ ಸಂಸದ ದಿನೇಶ್​ ತ್ರಿವೇದಿ

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಟಿಎಂಸಿ ಮುಖಂಡ ದಿನೇಶ್​ ತ್ರಿವೇದಿ ಇಂದು ಜೆಪಿ ನಡ್ಡಾ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Former TMC leader Dinesh Trivedi joins BJP
ದೀದಿಗೆ ಕೈಕೊಟ್ಟು ಬಿಜೆಪಿ ಸೇರಿದ ಟಿಎಂಸಿ ಸಂಸದ ದಿನೇಶ್​ ತ್ರಿವೇದಿ

ನವದೆಹಲಿ: ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಮುಖಂಡ ದಿನೇಶ್​ ತ್ರಿವೇದಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಫೆಬ್ರವರಿ 12 ರಂದು ತಮ್ಮ ಸಂಸದ ಸ್ಥಾನಕ್ಕೆ ತ್ರಿವೇದಿ ರಾಜೀನಾಮೆ ನೀಡಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಆಘಾತ ನೀಡಿದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ದಿನೇಶ್​ ತ್ರಿವೇದಿ ಕಮಲ ಹಿಡಿದಿದ್ದಾರೆ.

2009 ಹಾಗೂ 2014ರಲ್ಲಿ ಬರಾಕ್‌ಪೋರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ದಿನೇಶ್​ ತ್ರಿವೇದಿ ಜಯಭೇರಿ ಬಾರಿಸಿದ್ದರು. 2019ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: ನಂದಿಗ್ರಾಮದಿಂದ ಮಾತ್ರ ಕಣಕ್ಕಿಳಿದ ಮಮತಾ; ಬಿಜೆಪಿ ವಿರುದ್ಧ ದೀದಿಯ ರಣಕಹಳೆ

ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನಿನ್ನೆಯಷ್ಟೇ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, ನಂದಿಗ್ರಾಮ ಕ್ಷೇತ್ರದಿಂದ ಸೌಮೆಂದು ಅಧಿಕಾರಿ ವಿರುದ್ಧ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಟಿಎಂಸಿ ಸಚಿವನಾಗಿದ್ದ ಸುವೇಂದು ಅಧಿಕಾರಿ, ಅವರ ಸಹೋದರ ಸೌಮೆಂದು ಅಧಿಕಾರಿ ಸೇರಿದಂತೆ ಅನೇಕ ಟಿಎಂಸಿ ಮುಖಂಡರು ಹಾಗೂ ಶಾಸಕರು ಈಗಾಗಲೇ ಮಮತಾಗೆ ಕೈಕೊಟ್ಟು ಬಿಜೆಪಿ ಪಕ್ಷವನ್ನು ಸೇರಿದ್ದಾರೆ.

ABOUT THE AUTHOR

...view details