ಕರ್ನಾಟಕ

karnataka

ETV Bharat / bharat

ಭೂ ವಿವಾದ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ.. ಐವರ ಕಗ್ಗೊಲೆ - ಭೂ ವಿವಾದ

ಜಮೀನು ವಿಚಾರವಾಗಿ ನಡೆದ ಜಗಳದ ಸಂದರ್ಭದಲ್ಲಿ ಐವರು ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ.

FIVE PEOPLE MURDERED
FIVE PEOPLE MURDERED

By

Published : Aug 4, 2021, 4:30 PM IST

ನಳಂದಾ(ಬಿಹಾರ): ಭೂ ವಿವಾದಕೋಸ್ಕರ ಎರಡು ಗುಂಪುಗಳ ಮಧ್ಯೆ ನಡೆದ ಜಗಳದ ವೇಳೆ ಐವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಈ ಘಟನೆ ನಳಂದಾ ವಿಧಾನಸಭಾ ಕ್ಷೇತ್ರದ ಛಬಿಲಾಪುರ ಪೊಲೀಸ್ ಠಾಣೆಯ ಲೋದಿಪುರ ಗ್ರಾಮದಲ್ಲಿ ನಡೆದಿದೆ.

ಜಮೀನು ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದ ಸಂದರ್ಭದಲ್ಲಿ ಅದು ತಾರಕಕ್ಕೇರಿದೆ. ಈ ವೇಳೆ ಎರಡು ಗುಂಪಿನವರು ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು

ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ಮಧ್ಯೆ ಭೂ ವಿವಾದಕ್ಕಾಗಿ ಜಗಳ ನಡೆಯುತ್ತಿತ್ತು. ಇಂದು ಮಧ್ಯಾಹ್ನ ಕೂಡ ಇದೇ ವಿಷಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಜಗಳ ಆರಂಭಗೊಂಡಿದೆ. ಈ ವೇಳೆ ಐವರು ಸಾವನ್ನಪ್ಪಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಕೆಲವರ ಬಂಧನ ಸಹ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಕುಸ್ತಿಯಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ ರವಿ ದಹಿಯಾ.. ಗ್ರಾಮದಲ್ಲಿ ಸಂಭ್ರಮವೋ.. ಸಂಭ್ರಮ!

ABOUT THE AUTHOR

...view details