ಪ್ರಯಾಗ್ರಾಜ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದು,ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರಾಹುಲ್ ತಿವಾರಿ(42) ನೇಣು ಬಿಗಿದುಕೊಂಡಿದ್ದು, ಅವರ ಪತ್ನಿ ಪ್ರೀತಿ(38), ಮೂವರು ಮಕ್ಕಳಾದ ಮಹಿ(15),ಪಿಹು(13) ಮತ್ತು ಪೋಹು(110 ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಹರಿತವಾದ ವಸ್ತುವಿನಿಂದ ಮಹಿಳೆ ಮತ್ತು ಮೂವರು ಪುತ್ರಿಯರ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿಸಿದ್ದಾರೆ. ಪತ್ನಿ ಮತ್ತು ಪುತ್ರಿಯರನ್ನ ಕೊಂದ ವ್ಯಕ್ತಿ, ತದನಂತರ ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ತನಿಖೆ ನಂತರ ನಿಜಾಂಶ ಹೊರ ಬರಲಿದೆ.
ಇದನ್ನೂ ಓದಿ:ಸಂಗಾತಿ ಹಾವು ಕೊಂದಿರೋದಕ್ಕೆ ಪ್ರತೀಕಾರ.. ಸೇಡು ತೀರಿಸಿಕೊಳ್ಳಲು 7 ಸಲ ಕಚ್ಚಿದ ನಾಗಿಣಿ!
ಘಟನೆಗೆ ಸಂಬಂಧಿಸಿದಂತೆ ಯೋಗಿ ಸರ್ಕಾರದ ಮೇಲೆ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕೆ ವ್ಯಕ್ತಪಡಿಸಿದ್ದು, ಬಿಜೆಪಿ 2.0 ಸರ್ಕಾರ ಅಪರಾಧ ಮಾಡುವುದರಲ್ಲೇ ಮುಳುಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಅಗರವಾಲ್, ಕುಟುಂಬದ ಸದಸ್ಯನೇ ಎಲ್ಲರನ್ನೂ ಕೊಲೆ ಮಾಡಿ, ತದನಂತರ ಆತನು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಿದ್ದಾರೆ.