ಸಾಂಚೋರ್ (ರಾಜಸ್ಥಾನ): ಇಂಡಿಗೊ ಕಾರಿಗೆ ಟ್ರಕ್ ಗುದ್ದಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಸಾಂಚೋರ್ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರು ಸಾಂಚೋರ್ನ ಸ್ಥಳೀಯ ಕಾಂಗ್ರೆಸ್ ನಾಯಕ ಗಣಪತ್ ಸುತಾರ್ ಅವರ ಕುಟುಂಬಸ್ಥರಾಗಿದ್ದಾರೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಚಿಕಿತ್ಸೆ ವೇಳೆ ಪ್ರಾಣಬಿಟ್ಟಿದ್ದಾರೆ.