ಕೊಯ್ಲು, ಮಧ್ಯಪ್ರದೇಶ:ಇಲ್ಲಿನ ಕಟ್ನಿ ನದಿ ಬಳಿ ವಿಹಾರಕ್ಕೆ ಬಂದು ಸ್ನಾನಕ್ಕೆಂದು ನೀರಿಗಿಳಿದ ಐವರು ಬಾಲಕರು ಕೊಚ್ಚಿ ಹೋದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ಸೋಮವಾರ ನಡೆದಿದೆ. ಇದರಲ್ಲಿ ಮೂವರ ಶವಗಳನ್ನು ಪತ್ತೆ ಮಾಡಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತಪಟ್ಟ ಎಲ್ಲರು 13 ರಿಂದ 15 ವರ್ಷ ವಯೋಮಾನದವರಾಗಿದ್ದಾರೆ.
ನೀರಲ್ಲಿ ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡ ಮಕ್ಕಳಲ್ಲಿ ಓರ್ವ ಜನ್ಮದಿನದ ಸಂಭ್ರಮದಲ್ಲಿದ್ದ. ಆತ ತನ್ನ ಸ್ನೇಹಿತರೊಂದಿಗೆ ಕಟ್ನಿ ನದಿಗೆ ವಿಹಾರಕ್ಕೆಂದು ಬಂದಿದ್ದು, ಎಲ್ಲರೂ ನೀರಿಗೆ ಇಳಿದಿದ್ದಾರೆ. ಈ ವೇಳೆ ಸೆಳೆತಕ್ಕೆ ಸಿಲುಕಿ ಎಲ್ಲರೂ ನದಿಪಾಲಾಗಿದ್ದಾರೆ.
ಸಂಜೆಯಾದರೂ ವಿಹಾರಕ್ಕೆಂದು ಹೋದ ಮಕ್ಕಳು ವಾಪಸ್ ಆಗದಿದ್ದಾಗ ಪೋಷಕರು ಆತಂಕಕ್ಕೀಡಾಗಿದ್ದರು. ಬಳಿಕ ನದಿ ಪಾತ್ರಕ್ಕೆ ಬಂದು ಗಮನಿಸಿದಾಗ ಮಕ್ಕಳ ಬಟ್ಟೆಗಳು ದಡದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಬಾಲಕರು ನೀರಿಗೆ ಕೊಚ್ಚಿ ಹೋಗಿರುವುದು ಗೊತ್ತಾಗಿದೆ.