ಕರ್ನಾಟಕ

karnataka

ETV Bharat / bharat

ಟಿಂಬರ್​ ಡಿಪೋದಲ್ಲಿ ಭಾರಿ ಅಗ್ನಿ ಅವಘಡ.. 11 ಜನರ ಸಜೀವ ದಹನ: ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ - ಹೈದರಾಬಾದ್​ ಬೆಂಕಿ ಅವಘಡದಲ್ಲಿ ಐವರು ಸಾವು

ಟಿಂಬರ್​ ಡಿಪೋದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 11 ಜನರ ಸಜೀವ ದಹನಗೊಂಡಿರುವ ಘಟನೆ ನೆರೆಯ ರಾಜ್ಯ ತೆಲಂಗಾಣದ ಹೈದರಾಬಾದ್​ನಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​ ಘೋಷಣೆ ಮಾಡಿದ್ದಾರೆ.

Fire broke out in timber depot at Hyderabad, five people burnt alive in Hyderabad, Hyderabad fire news, ಹೈದರಾಬಾದ್​ನಲ್ಲಿ ಟಿಂಬರ್​ ಡಿಪೋದಲ್ಲಿ ಬೆಂಕಿ ಅವಘಡ, ಹೈದರಾಬಾದ್​ ಬೆಂಕಿ ಅವಘಡದಲ್ಲಿ ಐವರು ಸಾವು, ಹೈದರಾಬಾದ್​ ಬೆಂಕಿ ಅವಘಡ ಸುದ್ದಿ,
ಟಿಂಬರ್​ ಡಿಪೋದಲ್ಲಿ ಭಾರೀ ಬೆಂಕಿ ಅವಘಡ

By

Published : Mar 23, 2022, 8:13 AM IST

Updated : Mar 23, 2022, 10:47 AM IST

ಹೈದರಾಬಾದ್​:ಇಲ್ಲಿನ ಸಿಕಂದರಾಬಾದ್‌ನ ಬೋಯಗುಡದಲ್ಲಿರುವ ಟಿಂಬರ್ ಡಿಪೋದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, 11 ಜನರು ಸಜೀವ ದಹನವಾಗಿರುವ ದರ್ಘಟನೆ ಬೆಳಕಿಗೆ ಬಂದಿದೆ.

ಟಿಂಬರ್​ ಡಿಪೋದಲ್ಲಿ ಭಾರೀ ಬೆಂಕಿ ಅವಘಡ

ಓದಿ:ಉಕ್ರೇನ್​ - ರಷ್ಯಾ ಅಧ್ಯಕ್ಷರೊಂದಿಗೆ ಫೋನ್​ ಕರೆ ಮೂಲಕ ಮಾತುಕತೆ ನಡೆಸಿದ ಫ್ರಾನ್ಸ್ ನಾಯಕ!

ಬೆಳ್ಳಂಬೆಳಗ್ಗೆ ಸಿಕಂದರಾಬಾದ್​ನಲ್ಲಿ ಟಿಂಬರ್​​ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಿಗೆ ಮತ್ತು ಬಿದಿರುಗಳು ಇರುವುದರಿಂದ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾರಂಭಿಸಿತು. ಆದರೆ ಅಷ್ಟೊತ್ತಿಗಾಗಲೇ 11 ಜನರು ಸಜೀವ ದಹನಗೊಂಡಿದ್ದರು. ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಓದಿ:ಉಕ್ರೇನ್‌ನ ಮರಿಯುಪೋಲ್‌ ನಗರದ ಮೇಲೆ ರಷ್ಯಾ ಸೇನೆಯಿಂದ ಸೂಪರ್‌ ಪವರ್‌ಫುಲ್‌ ಬಾಂಬ್‌ ದಾಳಿ

ಅಪಘಾತ ಸಂಭವಿಸಿದಾಗ ಡಿಪೋದಲ್ಲಿ 15ಕ್ಕೂ ಹೆಚ್ಚು ಮಂದಿ ಇದ್ದರು ಎಂದು ತಿಳಿದು ಬಂದಿದೆ. ಈಗಾಗಲೇ 11 ಜನರ ಸಜೀವ ದಹನವಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೂವರು ಸಹ ಬೆಂಕಿಗೆ ಸಿಲುಕಿರುವ ಶಂಕೆಯಿದೆ. ಸದ್ಯ ಐದು ಅಗ್ನಿ ಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸ್ಥಳಕ್ಕೆ ಡಿಸಿ ಭೇಟಿ ನೀಡಿದ್ದು, ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಳಗಿನ ಜಾವ ನಾಲ್ಕು ಗಂಟೆಗೆ ಈ ಘಟನೆ ನಡೆದಿದ್ದು, 11 ಜನ ಮೃತಪಟ್ಟಿದ್ದಾರೆ. ಒಬ್ಬ ಘಟನೆಯಲ್ಲಿ ಸುರಕ್ಷಿತವಾಗಿ ಎಸ್ಕೇಪ್​ ಆಗುವಲ್ಲಿ ಯಶಸ್ವಿಯಾಗಿದ್ದಾನೆ. ಘಟನೆ ಬಗ್ಗೆ ತನಿಖೆ ಬಳಿಕವೇ ಎಲ್ಲ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ

ಪರಿಹಾರ ಘೋಷಿಸಿದ ಸಿಎಂ:ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್​, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

Last Updated : Mar 23, 2022, 10:47 AM IST

ABOUT THE AUTHOR

...view details