ಕರ್ನಾಟಕ

karnataka

ETV Bharat / bharat

ಯೂತ್​ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಎಫ್‌ಐಆರ್: ಕರ್ನಾಟಕದತ್ತ ಅಸ್ಸೋಂ ಪೊಲೀಸರ ತಂಡ

ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ವಿರುದ್ಧ ಕಿರುಕುಳ ಮತ್ತು ತಾರತಮ್ಯ ಆರೋಪ ಮಾಡಿದ್ದ ಅಸ್ಸೋಂ ಕಾಂಗ್ರೆಸ್ ಯುವ ಘಟಕದ ನಾಯಕಿ ಇದೀಗ ಎಫ್​ಐಆರ್ ದಾಖಲಿಸಿದ್ದಾರೆ.

Etv Bharat
Etv Bharat

By

Published : Apr 23, 2023, 9:54 AM IST

ಗುವಾಹಟಿ (ಅಸ್ಸೋಂ): ಪಕ್ಷದಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಅಸ್ಸೋಂ ಯುವ ಕಾಂಗ್ರೆಸ್‌ ನಾಯಕಿಯೊಬ್ಬರು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ವಿರುದ್ಧ ಕಿರುಕುಳ ಮತ್ತು ತಾರತಮ್ಯ ಆರೋಪ ಮಾಡಿ, ಎಫ್​ಐಆರ್ ದಾಖಲಿಸಿದ್ದಾರೆ. ಅಸ್ಸೋಂ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಅಸ್ಸೋಂ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 509, 294, 341, 352, 354, 354A (4) ಮತ್ತು 506 IPC RW ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. "ಇನ್ನು ಪ್ರಕರಣದ ತನಿಖೆಗಾಗಿ ಪೊಲೀಸರ ತಂಡ ಕರ್ನಾಟಕಕ್ಕೆ ತೆರಳಿದ್ದು, ಕೇಸ್​ಗೆ ಸಂಬಂಧಿಸಿದಂತೆ ಶ್ರೀನಿವಾಸ್ ಬಿ ವಿ ಅವರನ್ನು ಬಂಧಿಸುವ ಸಾಧ್ಯತೆಯಿದೆ. 4 - 5 ಸದಸ್ಯರ ಪೊಲೀಸ್ ತಂಡ ಕರ್ನಾಟಕಕ್ಕೆ ತೆರಳಿದೆ ಎಂದು ಅಸ್ಸೋಂ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ :ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ಸಿಡಿ ರಿಲೀಸ್​ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದೇಕೆ?: ಡಿಕೆಶಿ

ಕಳೆದ 6 ತಿಂಗಳಿಂದ ಶ್ರೀನಿವಾಸ್ ಬಿ ವಿ ನನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದ್ದಾರೆ. ಇನ್ನೊಂದೆಡೆ, ಶ್ರೀನಿವಾಸ್ ಬಿ ವಿ ಮತ್ತು ಉಸ್ತುವಾರಿ ಕಾರ್ಯದರ್ಶಿ ವರ್ಧನ್ ಯಾದವ್ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ಕೈ ನಾಯಕಿಯನ್ನು ಅಸ್ಸೋಂ ಕಾಂಗ್ರೆಸ್, ಯುವ ಘಟಕದ ಮುಖ್ಯಸ್ಥೆ ಸ್ಥಾನದಿಂದ ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆಂದು ಆರೋಪಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ.

ಇದನ್ನೂ ಓದಿ :ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ: ಅಧಿಕಾರಿಗಳ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಗರಂ

"ಈ ಎಲ್ಲ ಆರೋಪಗಳು ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತವಾಗಿದೆ. ಅವರು ಕಾಂಗ್ರೆಸ್​ ಪಕ್ಷ ಹಾಗೂ ಅದರ ನಾಯಕರ ಪ್ರತಿಷ್ಠೆಗೆ ಕಳಂಕ ತಂದಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದಾಗಿ" ಅಸ್ಸೋಂ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿದೆ.

ಇದನ್ನೂ ಓದಿ :ಲಿಂಗಾಯತ ಡ್ಯಾಂ ಒಡೆಯಲು ಹತ್ತು ಜನ ಡಿಕೆ ಶಿವಕುಮಾರ್ ಬಂದರೂ ಸಾಧ್ಯವಿಲ್ಲ: ಸಿ.ಸಿ. ಪಾಟೀಲ

ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿರುವ ಶ್ರೀನಿವಾಸ್ ಬಿ ವಿ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಜೊತೆಗೆ ತಮ್ಮ ವಿರುದ್ಧ ಅಸಂಸದೀಯ ಮತ್ತು ಮಾನಹಾನಿಕರ ಪದಗಳನ್ನು ಬಳಸಿದ್ದಕ್ಕಾಗಿ ಅವರ ವಿರುದ್ಧ ಸಹ ಈ ಹಿಂದೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ :ಬೇಕಾ ಫೋನ್‌ ನಂಬರ್? ಕಿರುಕುಳ ನೀಡಿದ ಹುಡುಗನಿಗೆ ಬಿತ್ತು ಧರ್ಮದೇಟು- ವಿಡಿಯೋ

For All Latest Updates

ABOUT THE AUTHOR

...view details