ಲಖನೌ(ಉತ್ತರ ಪ್ರದೇಶ): ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರ ನಿವಾಸ, ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಸೇರಿದಂತೆ ನೂರಾರು ಕೆಜಿ ಸುಗಂಧ ದ್ರವ್ಯ ಪತ್ತೆಯಾಗಿದೆ. ಸತತ ಐದು ದಿನಗಳ ಕಾಲ ದಾಳಿ ನಡೆಸಿರುವ ಅಧಿಕಾರಿಗಳು 200ಕ್ಕೂ ಅಧಿಕ ಕೋಟಿ ನಗದು ಪತ್ತೆ ಹಚ್ಚಿದ್ದಾರೆ. ಇದೇ ವಿಷಯವನ್ನಾಧರಿಸಿ ಇದೀಗ ಬಾಲಿವುಡ್ನಲ್ಲಿ ಚಿತ್ರವೊಂದು ಮೂಡಿ ಬರಲಿದೆ.
ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ರೇಡ್ ಚಿತ್ರ ಈಗಾಗಲೇ ಭರ್ಜರಿ ಯಶಸ್ಸು ಕಂಡಿದ್ದು, ಇದೀದ ಅದರ ಮುಂದುವರಿದ ಭಾಗವಾಗಿ ರೇಡ್ -2 ಚಿತ್ರ ಮೂಡಿ ಬರಲಿದ್ದು, ಕಾನ್ಪುರ್ ಹಾಗೂ ಕನೌಜ್ನಲ್ಲಿ ನಡೆದಿರುವ ದಾಳಿ ಆಧಾರಿಸಿ ಚಿತ್ರ ನಿರ್ಮಾಣಗೊಳ್ಳಲಿದೆ.
ಕಾನ್ಪುರ್ ಐಟಿ ದಾಳಿ ಆಧರಿತ ರೇಡ್ 2 ಚಿತ್ರ ತೆರೆಗೆ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರು ಮಾಡಿರುವ ತೆರಿಗೆ ವಂಚನೆ ಸೇರಿದಂತೆ ಅನೇಕ ವಿಷಯಗಳು ಚಿತ್ರದ ಪ್ರಮುಖ ಭಾಗವಾಗಲಿಲಿದ್ದು, ಮುಖ್ಯವಾಗಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸುವ ಹಾಗೂ ಹಣ ಪತ್ತೆ ಹಚ್ಚುವ ವಿಷಯ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
ಇದನ್ನೂ ಓದಿರಿ:₹257 ಕೋಟಿ, 23 ಕೆಜಿ ಚಿನ್ನದ ಒಡೆಯ.. ಹಳೇ ಸ್ಕೂಟರ್, ರಬ್ಬರ್ ಚಪ್ಪಲಿ ಧರಿಸುತ್ತಿದ್ದ ಪಿಯೂಷ್ ಜೈನ್!
ತಂದೆಯಿಂದ ಸುಗಂಧ ದ್ರವ್ಯ ತಯಾರಿಸುವ ಕಲೆ ಕರಗತ ಮಾಡಿಕೊಂಡಿದ್ದ ಪಿಯೂಷ್ ಜೈನ್ ಕೇವಲ 15 ವರ್ಷದಲ್ಲಿ ದೇಶದ ಹಲವು ಭಾಗಗಳಲ್ಲಿ ಪ್ರಸಿದ್ಧ ಉದ್ಯಮಿಯಾಗಿ ಹೊರಹೊಮ್ಮಿದ್ದು, ಅನೇಕ ಬೇನಾಮಿ ಕಂಪನಿ ಹೊಂದಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಇಷ್ಟೊಂದು ಹಣ ಗಳಿಕೆ ಮಾಡಿರುವುದು ಹೇಗೆ? ಎಂಬುದಕ್ಕೆ ಅಜಯ್ ದೇವಗನ್ ಅವರ ರೇಡ್ 2- ಚಿತ್ರದಲ್ಲಿ ಉತ್ತರ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರೇಡ್ ಚಿತ್ರದ ನಿರ್ಮಾಪಕ ಕುಮಾರ್ ಪಾಠಕ್ ಮಾತನಾಡಿದ್ದು, ಕಾನ್ಪುರ್ ಐಟಿ ದಾಳಿ ಆಧರಿಸಿ ಚಿತ್ರ ತಯಾರಿಸುವುದಾಗಿ ಘೋಷಣೆ ಮಾಡಿದ್ದಾರೆ.