ಚಿನ್ಸುರಾ(ಪಶ್ಚಿಮಬಂಗಾಳ):ಮೆರವಣಿಗೆಯಲ್ಲಿ ಕೂಗಿದ ಘೋಷಣೆಗಳಿಂದ ಕ್ರೋಧಗೊಂಡ ಟಿಎಂಸಿ ಶಾಸಕ ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಬಿಜೆಪಿ ಬಾವುಟ ಅಳವಡಿಸಿದ್ದ ಕೋಲಿನಿಂದಲೇ ಅವರನ್ನು ಥಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಶಾಸಕ ಅಸಿತ್ ಮಜುಂದಾರ್ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆ ಪ್ರೇರೇಪಣೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಆಗಿದ್ದೇನು?:ಬಿಜೆಪಿ ಕಾರ್ಯಕರ್ತರು ಆಡಳಿತ ಪಕ್ಷದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದರು. ಈ ವೇಳೆ, ಅದು ಟಿಎಂಸಿ ಕಚೇರಿ ಮುಂದೆ ಹೋಗುತ್ತಿದ್ದಾಗ, ಅಲ್ಲಿಯೇ ಇದ್ದ ಶಾಸಕ ಅಸಿತ್ ಮುಜುಂದಾರ್ ಮತ್ತು ಅವರ ಕಾರ್ಯಕರ್ತರು ಬಿಜೆಪಿ ವಾಹನದ ಮೇಲೆ ಏಕಾಏಕಿ ದಾಳಿ ನಡೆಸಿದರು.
ಕಾರ್ಯಕರ್ತರಿಗೆ ಬಿಜೆಪಿ ಸಹವರ್ತಿಗಳನ್ನು ಥಳಿಸುವಂತೆ ಆದೇಶಿಸಿದರು. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿಗರ ಮೇಲೆ ಮುಗಿಬಿದ್ದಿದ್ದಾರೆ. ಮಹಿಳೆಯರು ಬಿಜೆಪಿಗರ ಕೊರಳುಪಟ್ಟಿ ಹಿಡಿದು ಹೊಡೆದಿದ್ದಾರೆ.