ನಾಗಾಂವ್(ಅಸ್ಸೋಂ):ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಕಾದಾಡಿರುವ ಘಟನೆ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಂಪುರ್ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಗ್ರಾಮಸ್ಥರು ಎರಡು ಆನೆಗಳ ನಡುವಿನ ಭೀಕರ ಕಾಳಗಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಆನೆಗಳ ಘರ್ಷಣೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಅಸ್ಸೋಂನ ಹಲವೆಡೆ ಮನುಷ್ಯ ಮತ್ತು ಆನೆಗಳ ನಡುವಿನ ಸಂಘರ್ಷ ಮುಂದುವರೆದಿದೆ. ಅಸ್ಸೋಂನ ನಾಗಾಂವ್ ಜಿಲ್ಲೆಯ ಕಂಪುರ್ ಪ್ರದೇಶದ ಜನರು ದೀರ್ಘಕಾಲದಿಂದ ಆನೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಬಾಮುನಿ ಮತ್ತು ಕಂದಲಿ ಬೆಟ್ಟಗಳಿಂದ ಕಾಡಾನೆಗಳು ಆಹಾರ ಅರಸಿ ಗದ್ದೆಗಳಿಗೆ ಬರುತ್ತಿವೆ. ಆನೆಗಳ ದೊಡ್ಡ ಹಿಂಡೊಂದು ರೈಲು ಮಾರ್ಗವನ್ನು ದಾಟಿ ಕಂಪುರ್ ಪಟಿಯಾಪಮ್ ಮೀಸಲು ಪ್ರದೇಶದಲ್ಲಿ ನೆಲೆಸಿದೆ.