ಬೋಟಾಡ್ (ಗುಜರಾತ್): ಗುಜರಾತ್ನಲ್ಲಿ ಕಳ್ಳಭಟ್ಟಿ ಸೇವಿಸಿ ಇದುವರೆಗೆ 57 ಜನರು ಬಲಿಯಾಗಿದ್ದಾರೆ. ಇದರ ಪರಿಣಾಮ ಮೃತರ ಕುಟುಂಬಗಳು ದಿಕ್ಕು ತೋಚದಂತಹ ಪರಿಸ್ಥಿತಿಗೆ ಸಿಲುಕಿವೆ. ಅಲ್ಲದೇ, ಪುಟ್ಟ ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇದರ ನಡುವೆ ಪೊಲೀಸರು ಮಾನವೀಯತೆ ಮರೆದಿದ್ದು, ನಾಲ್ವರು ಮಕ್ಕಳನ್ನು ದತ್ತು ಪಡೆದು ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಬೋಟಾಡ್ ಜಿಲ್ಲೆಯ ದೇವಗಣ ಗ್ರಾಮದ 40 ವರ್ಷದ ಕಾನಾ ಶೇಖ್ಲಿಯಾ ಎಂಬುವರು ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಈತನಿಗೆ ಒಬ್ಬ ಪುತ್ರಿ ಹಾಗೂ ಮೂವರು ಪುತ್ರರು ಸೇರಿ ನಾಲ್ವರು ಮಕ್ಕಳು ಇದ್ದಾರೆ. ಕಾನಾ ಶೇಖ್ಲಿಯಾ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಹೀಗಾಗಿ ಈಗ ತಂದೆಯನ್ನು ಕಳೆದುಕೊಂಡ ಈ ನಾಲ್ವರು ಮಕ್ಕಳು ನಿರ್ಗತಿಕರಾಗಿದ್ದಾರೆ. ಅಲ್ಲದೇ, ಮಕ್ಕಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತೆ ಆಗಿತ್ತು. ಈ ವಿಷಯ ಪೊಲೀಸರು ದತ್ತು ತೆಗೆದುಕೊಳ್ಳುವ ಮೂಲಕ ನೆರವಿಗೆ ಬಂದಿದ್ದಾರೆ.