ಸಂಭಾಲ್(ಉತ್ತರಪ್ರದೇಶ): ಜಿಲ್ಲೆಯಲ್ಲಿ ಮಾನವೀಯತೆ, ಬಾಂಧವ್ಯವನ್ನು ಮುಜುಗರಕ್ಕೀಡು ಮಾಡುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಹೃದಯಹೀನ ತಂದೆಯೊಬ್ಬ ತನ್ನ ಸ್ವಂತ ಮಗನನ್ನೇ ಕೊಂದು ಕಬ್ಬಿನ ಗದ್ದೆಯಲ್ಲಿ ಎಸೆದು ನಾಪತ್ತೆಯ ನಾಟಕವಾಡಿದ್ದ. ಪೊಲೀಸರು ಮಗುವಿನ ಶವವನ್ನು ಕಬ್ಬಿನ ಗದ್ದೆಯಿಂದ ವಶಪಡಿಸಿಕೊಂಡು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಮಗನ ಹತ್ಯೆಗೆ ಆರೋಪಿ ತಂದೆ ನೀಡಿರುವ ಕಾರಣ ಬೆಚ್ಚಿಬೀಳಿಸುವಂತಿದೆ.
ಚಂದೌಸಿ ಕೊಟ್ವಾಲಿ ಪ್ರದೇಶದ ಸೈಂಜನಿ ಗ್ರಾಮದ ನಿವಾಸಿ ಧರ್ಮೇಶ್ ಜನವರಿ 5 ರಂದು ತನ್ನ 6 ವರ್ಷದ ಮಗ ರಜತ್ ನಾಪತ್ತೆಯಾಗಿದ್ದಾನೆ ಎಂದು ದೂರನ್ನು ನೀಡಿದ್ದಾರೆ ಎಂದು ಎಸ್ಪಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಬಾಲಕನ ಹುಡುಕಾಟಕ್ಕೆ ತಂಡ ರಚಿಸಿದ್ದರು. ಎಸ್ಪಿ ಚಕ್ರೇಶ್ ಮಿಶ್ರಾ ಪ್ರಕಾರ, ನಾಪತ್ತೆಯಾದ ದೂರನ್ನು ದಾಖಲಿಸಿಕೊಂಡ ನಂತರ ಪೊಲೀಸರು ಗ್ರಾಮದಲ್ಲಿ ಅಳವಡಿಸಲಾದ ಸಿಸಿಟಿವಿ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದರು. ಪೊಲೀಸರು ಶುಕ್ರವಾರ ಗ್ರಾಮದ ಮುಂದಿನ ಕಬ್ಬಿನ ಗದ್ದೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ತನಿಖೆ ಆರಂಭಿಸಿದರು.
ಓದಿ:35 ಬಾರಿ ಓಡಿ ಹೋದ ಹೆಂಡತಿ, ಸಣ್ಣ ಮಕ್ಕಳೊಂದಿಗೆ ಭಿಕ್ಷೆಗೆ ಇಳಿದ ಪತಿ: ಹೆಂಡತಿ ತಿರುಗಿ ಬರದಿದ್ದರೆ ಆತ್ಯಹತ್ಯೆ ಬೆದರಿಕೆ!
ಬಾಲಕ ನಾಪತ್ತೆಯಾಗಿರಲಿಲ್ಲ ಎಂದು ಎಸ್ಪಿ ತಿಳಿಸಿದ್ದು, ಆತನ ತಂದೆ ಧರ್ಮೇಶ್ ಶೂಲೆಸ್ನಿಂದ ತನ್ನ ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕಬ್ಬಿನ ಗದ್ದೆಯಲ್ಲಿ ಶವ ಎಸೆದು ನಾಪತ್ತೆಯ ನಾಟಕವಾಡಿದ್ದಾನೆ. ಆರೋಪಿ ಧರ್ಮೇಶ್ಗೆ ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನವಿದ್ದು, ಇದರಿಂದ ಪ್ರತಿದಿನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಬಳಿಕ ತನ್ನ ಮಗುನಿಗೆ ತೀವ್ರವಾಗಿ ಥಳಿಸುತ್ತಿದ್ದ. ಘಟನೆ ನಡೆದ ಜನವರಿ 5ರಂದು ಆರೋಪಿ ತನ್ನ ಅಮಾಯಕ ಮಗನನ್ನು ಜಮೀನಿಗೆ ಕರೆದೊಯ್ದು ಶೂಲೇಸ್ನಿಂದ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಮಗು ನಾಪತ್ತೆಯ ಬಗ್ಗೆ ನಾಟಕವಾಡಿದ್ದಾನೆ. ತನಿಖೆ ಮೂಲಕ ಹಂತಕ ಯಾರೆಂಬುದು ಪತ್ತೆಯಾಗಿದ್ದು, ಕೊಲೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರೋಪಿ ಧರ್ಮೇಶ್, ‘ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು ನಾನೇ. ನನ್ನ ಹೆಂಡತಿ ಮತ್ತೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆ. ಹೀಗಾಗಿ ನನ್ನ ಮಗನನ್ನು ಕೊಲೆ ಮಾಡಿದ್ದೇನೆ. ಈ ಮಗು ನನ್ನದಲ್ಲ ಅಂದ್ಮೇಲೆ ಇಟ್ಕೊಂಡು ನಾನೇನು ಮಾಡಲಿ. ಕೊಲೆ ಮಾಡಿದ ಬಳಿಕ ಮಗ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ತನಿಖೆ ವೇಳೆ ನಾನೇ ಆರೋಪಿಯೆಂದು ಪೊಲೀಸರಿಗೆ ತಿಳಿಯಿತು ಎಂದು ಆರೋಪಿ ಹೇಳಿದ್ದಾನೆ. ಸಂಭಾಲ್ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಎರಡು ಕೊಲೆ ಘಟನೆಗಳು ಮುನ್ನೆಲೆಗೆ ಬಂದಿವೆ. ರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹೋದರನೊಬ್ಬ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಅದೇ ಚಂದೌಸಿ ಕೊತ್ವಾಲಿ ಪ್ರದೇಶದಲ್ಲಿ ತಂದೆಯೇ ಮಗನನ್ನು ಕೊಂದಿದ್ದಾನೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಆರೋಪಿ ಹೆಂಡ್ತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಓದಿ:ತಾಯಿಯ ಅಪಘಾತದಿಂದಲೇ ಪ್ರೇರಣೆ: ವಿದ್ಯಾರ್ಥಿನಿಯೇ ತಯಾರಿಸಿದಳು ಸ್ಮಾರ್ಟ್ ಹೆಲ್ಮೆಟ್.. ಏನಿದರ ವಿಶೇಷತೆ ಅಂತೀರಾ?