ನವದೆಹಲಿ: ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದ ತಂದೆ ಆತ್ಮಹತ್ಯಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನೋಯ್ಡಾದ ಸೆಕ್ಟರ್ 34ರಲ್ಲಿ ಖಾಸಗಿ ಶಾಲೆಯ ಬಳಿ ಆದ ಇಬ್ಬರು ಮುಗ್ಧ ಮಕ್ಕಳ ಹತ್ಯೆಗೆ ಕಾರಣವೇನು ಎಂಬುದು ತಿಳಿದಿಲ್ಲ.
ಆದ್ರೆ, ಬಸಾಯಿ ಗ್ರಾಮದಲ್ಲಿ ಆ ಮಕ್ಕಳ ತಂದೆ ನೇಣಿಗೆ ಶರಣಾಗಿದ್ದಾನೆ. ಆತ ಬರೆದಿಟ್ಟ ಡೆತ್ ನೋಟ್ನಲ್ಲಿ ತನ್ನ ಮಕ್ಕಳನ್ನು ಕೊಲೆ ಮಾಡಿರುವ ವಿಷಯ ಬಹಿರಂಗವಾಗಿದೆ.
ಬಸಾಯಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಂದೆ ಮಹೇಶನ ಮೃತದೇಹ ಪೊಲೀಸರಿಗೆ ಸಿಕ್ಕಿದೆ. ಎರಡು ದಿನಗಳ ಹಿಂದೆ ಎರಡು ಮಕ್ಕಳ ಶವಗಳು ಸೆಕ್ಟರ್ -34 ರಲ್ಲಿರುವ ಶಾಲೆಯ ಬಳಿ ಪತ್ತೆಯಾಗಿದ್ದವು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಮೂಲಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.