ಕರ್ನಾಟಕ

karnataka

ETV Bharat / bharat

ಜನವರಿ 5ಕ್ಕೆ ಪಂಜಾಬ್​​​ಗೆ ಮೋದಿ ಭೇಟಿ... ಪ್ರತಿಭಟಿಸಲು ರೈತರು ಸಜ್ಜು

ಯುನೈಟೆಡ್ ಕಿಸಾನ್ ಮೋರ್ಚಾದ 9 ಸದಸ್ಯರ ಸಮನ್ವಯ ಸಮಿತಿಯ ಒಪ್ಪಿಗೆಯೊಂದಿಗೆ ಮೋದಿಯವರ ಪಂಜಾಬ್ ಭೇಟಿಯನ್ನು ವಿರೋಧಿಸಲು ಸಂಘಟನೆಗಳು ಕರೆ ನೀಡಿವೆ.

5ಜ.5ಕ್ಕೆ ಪಂಜಾಬ್​​​ಗೆ ಮೋದಿ ಭೇಟಿ... ಪ್ರತಿಭಟಿಸಲು ರೈತರು ಸಜ್ಜು
5ಜ.5ಕ್ಕೆ ಪಂಜಾಬ್​​​ಗೆ ಮೋದಿ ಭೇಟಿ... ಪ್ರತಿಭಟಿಸಲು ರೈತರು ಸಜ್ಜು

By

Published : Jan 1, 2022, 6:37 AM IST

ಅಮೃತಸರ್​:ಕೃಷಿ ಕಾನೂನುಗಳನ್ನು ವಿರೋಧಿಸಿ ಯಶಸ್ವಿಯಾಗಿರುವ ರೈತ ಸಂಘಟನೆಗಳು ಪ್ರಧಾನಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿವೆ. ಜನವರಿ ಐದರಂದು ಪ್ರಧಾನಿ ಮೋದಿ ಪಂಜಾಬ್​ಗೆ ಭೇಟಿ ನೀಡಲಿದ್ದಾರೆ. ಈ ವೇಳೆ, ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಪಂಜಾಬ್​ದ ರೈತ ಸಂಘಟನೆಗಳು ಘೋಷಿಸಿವೆ.

5ಜ.5ಕ್ಕೆ ಪಂಜಾಬ್​​​ಗೆ ಮೋದಿ ಭೇಟಿ... ಪ್ರತಿಭಟಿಸಲು ರೈತರು ಸಜ್ಜು

ಯುನೈಟೆಡ್ ಕಿಸಾನ್ ಮೋರ್ಚಾದ 9 ಸದಸ್ಯರ ಸಮನ್ವಯ ಸಮಿತಿಯ ಒಪ್ಪಿಗೆಯೊಂದಿಗೆ ಮೋದಿಯವರ ಪಂಜಾಬ್ ಭೇಟಿಯನ್ನು ವಿರೋಧಿಸಲು ಸಂಘಟನೆಗಳು ಕರೆ ನೀಡಿವೆ. ರೈತ ಮುಖಂಡ ಗುರ್ಮೀತ್ ಸಿಂಗ್ ಮಹಿಮಾ ಮಾತನಾಡಿ, ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ, ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿರುವ ಸರ್ಕಾರ ಈ ಬಗ್ಗೆ ಯಾವುದೇ ಗಂಭೀರವಾದ ಚಿಂತನೆ ಹಾಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ರೈತರಿಗೆ ನೀಡುವ ಎಂಎಸ್​​ಪಿ ನೀಡುವ ಕುರಿತು ಹಾಗೂ ಈ ಬಗ್ಗೆ ರಚನೆ ಮಾಡುವ ಸಮಿತಿ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ, ಜನವರಿ 5 ರಂದು ಪ್ರಧಾನಿ ಅವರ ಪಂಜಾಬ್ ಭೇಟಿ ವಿರೋಧಿಸುವುದಾಗಿ ಪ್ರಕಟಿಸಿದ್ದಾರೆ.

ಇದ್ನನೂ ಓದಿ:ಸಿಹಿ-ಕಹಿ ಕ್ಷಣಗಳ ನೀಡಿ ಸರಿದ 2021: 2022ರ ನೂತನ ವರ್ಷಾಚರಣೆಯ ಶುಭಾಶಯಗಳು

ಇನ್ನು ಲಖಿಂಪುರಖೇರಿಯಲ್ಲಿ ರೈತರಿಗೆ ಥಳಿಸಿದ ಘಟನೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮುಖಂಡ ಗುರ್ಮೀತ್ ಸಿಂಗ್ ಮಹಿಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ವಿರುದ್ಧ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಅವರು, ರೈತರು, ಕಾರ್ಮಿಕರು, ನೌಕರರು ಮತ್ತು ಯುವ ಸಂಘಟನೆಗಳ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details