ಕರ್ನಾಟಕ

karnataka

ETV Bharat / bharat

ಜಮೀನು ವಿವಾದದಿಂದ ರೈತ ಆತ್ಮಹತ್ಯೆ: ಮೂರು ದಿನದಿಂದ ಮರದಲ್ಲೇ ನೇತಾಡುತ್ತಿದೆ ದೇಹ

ರೈತ ಸಿದ್ದರಾಮುಲು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯ ಸಿಗುವವರೆಗೂ ಶವವನ್ನು ಕೆಳಗಿಳಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರದಿಂದ ರೈತನ ಶವ ಮರದಲ್ಲೇ ನೇತಾಡುತ್ತಿದೆ.

ಜಮೀನು ವಿವಾದದಿಂದ ರೈತ ಆತ್ಮಹತ್ಯೆ
ಜಮೀನು ವಿವಾದದಿಂದ ರೈತ ಆತ್ಮಹತ್ಯೆ

By

Published : Feb 21, 2022, 5:01 PM IST

Updated : Feb 21, 2022, 11:21 PM IST

ಕಾಮರೆಡ್ಡಿ(ತೆಲಂಗಾಣ) : ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಶವ ಮೂರು ದಿನದಿಂದ ಮರದಲ್ಲೇ ನೇತಾಡುತ್ತಿದೆ. ಕಾಮರೆಡ್ಡಿ ಜಿಲ್ಲೆಯ ಪೆದ್ದ ಮಲ್ಲಾರೆಡ್ಡಿ ಬಿಕ್ಕನೂರು ಮಂಡಲದಲ್ಲಿ ಈ ಘಟನೆ ನಡೆದಿದೆ.

ರೈತ ಸಿದ್ದರಾಮುಲು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನು ವಿವಾದದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ನ್ಯಾಯ ಸಿಗುವವರೆಗೂ ಶವ ಕೆಳಗಿಳಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರದಿಂದ ರೈತನ ಶವ ಮರದಲ್ಲೇ ನೇತಾಡುತ್ತಿದೆ.

ಮೂರು ದಿನದಿಂದ ಮರದಲ್ಲೇ ನೇತಾಡುತ್ತಿದೆ ದೇಹ

ಇದನ್ನೂ ಓದಿ: ಕಾಗೆಗಳ ರಿವೇಂಜ್​.. ಈ ಊರಿನಲ್ಲಿ ನಡೆದು ಹೋಗುವಾಗಲೂ ತಲೆಗೆ ಹಾಕಿಕೊಳ್ಬೇಕು ಹೆಲ್ಮೆಟ್..!

ಜಮೀನಿನ ಗಡಿಗೆ ಕಲ್ಲು ತೂರುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಿದ್ದರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಇದಕ್ಕೆ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದನಂತೆ. ಪರಿಣಾಮ ಸಿದ್ಧರಾಮುಲುನನ್ನು ಪೊಲೀಸರು ಎರಡು ಬಾರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ನ್ಯಾಯ ಸಿಗುವವರೆಗೂ ಶವವನ್ನು ಕೆಳಗಿಳಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

Last Updated : Feb 21, 2022, 11:21 PM IST

ABOUT THE AUTHOR

...view details