ನವದೆಹಲಿ:ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ ಅವರಿಗೆ ನೋಯ್ಡಾ ಪೊಲೀಸರು ಶಾಕ್ ನೀಡಿದ್ದಾರೆ. ಸೆಕ್ಷನ್ 144ರಡಿ ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿ, ಸೆಕ್ಷನ್ 188 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನ್ಮ ದಿನ ಆಚರಿಸಲು ಬಂದು ಜೈಲು ಸೇರಿದ ಖ್ಯಾತ ಯೂಟ್ಯೂಬರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ನೋಯ್ಡಾದ ಸೆಕ್ಟರ್ 51 ಮೆಟ್ರೋ ಸ್ಟೇಷನ್ಗೆ ಗೌರವ್ ತನೇಜಾ ಬಂದಿದ್ದರು. ಈ ಮಾಹಿತಿಯನ್ನು ಪತ್ನಿ ರಿತು ತನೇಜಾ ಯೂಟ್ಯೂಬ್ ಮೂಲಕ ಹಂಚಿಕೊಂಡಿದ್ದರು. ಆದರೆ, ಗೌರವ್ ತನೇಜಾ ಬರುವ ಮುನ್ನವೇ ಮೆಟ್ರೋ ಸ್ಟೇಷನ್ ಬಳಿ ಅಭಿಮಾನಿಗಳು ಬಂದು ಸೇರಿದ್ದರು. ಅಲ್ಲದೇ, ಅಲ್ಲಿನ ಪರಿಸ್ಥಿತಿ ನೆರೆದಿದ್ದ ಜನರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಜೊತೆಗೆ ಟ್ರಾಫಿಕ್ ಜಾಮ್ಕೂಡಾ ಉಂಟಾಗಿದೆ.
ಜನ್ಮ ದಿನ ಆಚರಿಸಲು ಬಂದು ಜೈಲು ಸೇರಿದ ಖ್ಯಾತ ಯೂಟ್ಯೂಬರ್ ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಹಾಗೂ ಅಲ್ಲಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ ಇದ್ದರೂ ಕೂಡ ಹೆಚ್ಚಿನ ಜನರನ್ನು ಸೇರಿಸಿದ ಕಾರಣ ಗೌರವ್ ತನೇಜಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜನ್ಮ ದಿನ ಆಚರಿಸಲು ಬಂದು ಜೈಲು ಸೇರಿದ ಖ್ಯಾತ ಯೂಟ್ಯೂಬರ್ ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಇಡೀ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇದನ್ನು ಗೌರವ್ ತನೇಜಾ ಉಲ್ಲಂಘಿಸಿದ್ದಾರೆ. ಅಲ್ಲದೇ, ಯಾವುದೇ ಅನುಮತಿಯಿಲ್ಲದೇ ಹುಟ್ಟುಹಬ್ಬ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:200 ವರ್ಷಗಳ ಹಳೆಯ ಮರ ಕಡಿಯಲು ಮುಂದಾದ ಅರಣ್ಯ ಇಲಾಖೆ.. ಸ್ಥಳಾಂತರ ಮಾಡಿ ಉಳಿಸಲು ಅಭಿಮಾನ ಶುರು