ಕರ್ನಾಟಕ

karnataka

ETV Bharat / bharat

ಕೊರೊನಾ ಕಾಲದಲ್ಲಿ ಭಯದಿಂದ ದೂರವಿರಿ.. ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ದಿನೇಶ್ ಸಂದರ್ಶನ - ಈಟಿವಿ ಭಾರತ

ಎಡಿಜಿ ದಿನೇಶ್ ಎಂಎನ್ ಅವರು 1985ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಮೂಲತಃ ಕರ್ನಾಟಕದವರು. ಸೊಹ್ರಾಬುದ್ದೀನ್ ಹಾಗೂ ತುಳಸಿರಾಮ್ ಎನ್​​ಕೌಂಟರ್​​​ ಪ್ರಕರಣದಲ್ಲಿ 2007ರಿಂದ 2014ರ ವರೆಗೆ 7 ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಆದರೆ ಇದಾದ ಬಳಿಕ ಪ್ರಕರಣದಿಂದ ಖುಲಾಸೆಗೊಂಡು ಎಸಿಬಿ ಎಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಈಟಿವಿ ಭಾರತ ನಡೆಸಿರುವ ಸಂದರ್ಶನ ಇಲ್ಲಿದೆ.

ಐಪಿಎಸ್ ಅಧಿಕಾರಿ ಎಡಿಜಿ ದಿನೇಶ್
ಐಪಿಎಸ್ ಅಧಿಕಾರಿ ಎಡಿಜಿ ದಿನೇಶ್

By

Published : May 20, 2021, 10:50 PM IST

ಜೈಪುರ (ರಾಜಸ್ಥಾನ): ಕೊರೊನಾ 2ನೇ ಅಲೆಯಿಂದಾಗಿ ದೇಶದಾದ್ಯಂತ ಲಾಕ್​ಡೌನ್ ಹೇರಲಾಗಿದ್ದು, ಹೀಗಾಗಿ ಜನರು ತಮ್ಮ ಮನೆಯಲ್ಲಿಯೇ ಬಂಧಿಸಲ್ಪಟ್ಟಿದ್ದಾರೆ. ಜನತೆ ಕೊರೊನಾ ಭಯದಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿಯೂ ಎದುರಾಗಿದ್ದು, ಜನರಲ್ಲಿ ನಕಾರಾತ್ಮಕ ಭಾವನೆ ಹೆಚ್ಚಾಗತೊಡಗಿದೆ. ಈ ಹಿನ್ನೆಲೆ ಕೋವಿಡ್​​​​ ಒತ್ತಡ ಮತ್ತು ಭಯದಿಂದ ಹೊರ ಬರುವ ಕುರಿತಂತೆ ಕರ್ನಾಟಕ ಮೂಲಕ ಐಪಿಎಸ್ ಅಧಿಕಾರಿ ಪ್ರಸ್ತುತ ಜೈಪುರದ ಎಸಿಬಿ ಎಡಿಜಿ ದಿನೇಶ್ ಎಂ.ಎನ್. ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ಕೆಲ ನಕಾರಾತ್ಮಕ ವಿಷಯಗಳಿಂದ ದೂರವಿರುವಂತೆ ಅವರು ಸೂಚನೆ ನೀಡಿದ್ದಾರೆ. ಲಾಕ್​ಡೌನ್​​ನಲ್ಲಿ ಮನೆಯಲ್ಲಿ ಬಂಧಿಯಾಗಿರುವ ಯುವಕರು ಹೆಚ್ಚಿನ ಒತ್ತಡ ಎದುರಿಸುತ್ತಾರಂತೆ. ಅಲ್ಲದೆ ವೃತ್ತಿ ಜೀವನದಲ್ಲಿರುವವರು ಬಿಡುವಿಲ್ಲದ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನುತ್ತಾರೆ ದಿನೇಶ್.

ಪ್ರತಿ ಮನೆಯಲ್ಲೂ ಕುಟುಂಬಸ್ಥರ ಮೇಲೆ ಅವರ ಸದಸ್ಯರ ರಕ್ಷಣೆಯ ಜವಾಬ್ದಾರಿ ಇದೆ. ಅವರು ತಮ್ಮ ಕುಟುಂಬದ ಸದಸ್ಯರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಇಂತಹ ಕಾಲದಲ್ಲಿ ಹಲವು ನಕಾರಾತ್ಮಕ ಭಾವನೆಗಳು ಕಾಡಲಾರಂಭಿಸುತ್ತವೆ. ಇಂತಹ ನೆಗೆಟಿವ್ ಆಲೋಚನೆಗಳ ಕಡೆ ಗಮನ ಹರಿಸದೆ ಎಂತಹ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿ ಚಿಂತಿಸುವುದು ಉತ್ತಮ ಎಂದಿದ್ದಾರೆ.

ಕರ್ನಾಟಕ ಮೂಲಕ ಐಪಿಎಸ್ ಅಧಿಕಾರಿ ಎಡಿಜಿ ದಿನೇಶ್ ಸಂದರ್ಶನ

ಕೊರೊನಾ ಪೀಡಿತ 100 ಜನರಲ್ಲಿ 99 ಮಂದಿ ಗುಣಮುಖರಾಗುತ್ತಾರೆ. ಆದರೆ ನಾವು ಶೇ 1ರಷ್ಟು ಜನತೆಯ ಬಗ್ಗೆ ಯಾವಾಗಲೂ ಯೋಚಿಸುವುದು ಬಿಟ್ಟು ಉಳಿದ 99ರಷ್ಟು ಜನರ ಕಡೆ ಯೋಚಿಸಬೇಕು. ಇದು ನಮ್ಮಲ್ಲಿಯೇ ಆತ್ಮಸ್ಥೈರ್ಯ ಹೆಚ್ಚುತ್ತದೆ. ತಮ್ಮ ಕುಟುಂಬಗಳೊಡನೆ ಹೆಚ್ಚು ಸಮಯ ಕಳೆಯಿರಿ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ ಸಂತೋಷದಿಂದಿರಿ ಎಂದಿದ್ದಾರೆ.

ದಿನೇಶ್ ಅವರು ಎನ್​​ಕೌಂಟರ್ ಪ್ರಕರಣ ಸಂಬಂಧ 7 ವರ್ಷ ಜೈಲುವಾಸ ಅನುಭವಿಸಿದ್ದರು. ಈ ಸಮಯವನ್ನು ಲಾಕ್​ಡೌನ್ ಸಮಯಕ್ಕೆ ಹೋಲಿಸಿದರೆ ಅವರು ಅಷ್ಟೇನು ವ್ಯತ್ಯಾಸಗಳಿಲ್ಲ ಎನ್ನುತ್ತಾರೆ.

ಜೈಲಿನಲ್ಲಿ ಜಾಮೀನು ಸಿಗಲಿದ್ಯಾ, ಯಾವಾಗ ಸಿಗಲಿದೆ ಎಂಬಿತ್ಯಾದಿ ಒತ್ತಡಗಳು ನಮ್ಮ ಮುಂದಿದ್ದವು, ಈಗಲೂ ಜನರು ಕೊರೊನಾ ಬರಬಹುದೆ ಬಂದರೂ ಉತ್ತಮ ಚಿಕಿತ್ಸೆ ಸಿಗಬಹುದೇ..? ಎಂಬಿತ್ಯಾದಿ ಒತ್ತಡದಲ್ಲಿದ್ದಾರೆ ಎಂದಿದ್ದಾರೆ.

ABOUT THE AUTHOR

...view details