ಕರ್ನಾಟಕ

karnataka

ETV Bharat / bharat

Horoscope Today: ಯಾರಿಗೆ ಒಳಿತು ಮಾಡಲಿದೆ ಬುಧವಾರದ ಭವಿಷ್ಯ?

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತಾದ ಮಾಹಿತಿ ಇಲ್ಲಿದೆ.

Horoscope Today
Horoscope Today

By

Published : Dec 15, 2021, 6:00 AM IST

ಮೇಷ:ಇಂದು ಅಲೆಯ ಹರಿವಿನೊಂದಿಗೆ ಮುನ್ನಡೆಯಿರಿ. ಇದು ನಿಮ್ಮ ಬಾಂಧವ್ಯಗಳಿಗೆ ಪೂರಕವಾದ ಸಲಹೆ. ಸಾಮಾನ್ಯ ನಿಯಮದಂತೆ ನೀವು ನಿಶ್ಚಯಾತ್ಮಕವಾಗಿರುತ್ತೀರಿ, ಆದರೆ ಅದನ್ನು ನೀವು ನಂತರಕ್ಕೆ ಉಳಿಸಿಕೊಳ್ಳಬಹುದು. ಈ ದಿನ ಉದಾರವಾಗಿರುವ ಮತ್ತು ನಿಮ್ಮ ಪ್ರೀತಿಪಾತ್ರರ ಬಯಕೆಗಳನ್ನು ಒಪ್ಪಿಕೊಳ್ಳುವ ದಿನ. ನೀವು ಆತ/ಆಕೆಗೆ ಪ್ರಪೋಸ್ ಮಾಡುವ ಸಾಧ್ಯತೆ ಇದೆ.

ವೃಷಭ:ಈ ದಿನ ಸುದೀರ್ಘ ಶಾಪಿಂಗ್​ನಲ್ಲಿ ತೊಡಗಿಕೊಳ್ಳುವ ದಿನದಂತೆ ಕಾಣುತ್ತದೆ. ನೀವು ಮಾಲ್ ಗಳು, ಮಾರ್ಕೆಟ್ ಗಳು, ಡಾಲರ್ ಮಳಿಗೆಗಳು ಮತ್ತು ಬಾರ್ಗೇನ್ ಕೌಂಟರ್ ಗಳಿಗೆ ಸುತ್ತು ಹಾಕುತ್ತೀರಿ. ಬೆಲೆಗಳ ಕುರಿತು ಚೌಕಾಸಿ ಮಾಡುವಲ್ಲಿ, ನಿಮ್ಮ ಕೊಳ್ಳುವಿಕೆಗೆ ಅತ್ಯುತ್ತಮ ಡೀಲ್ ಗಳನ್ನು ಪಡೆಯುವಲ್ಲಿ ನೀವು ಸಂತೋಷವಾಗಿ ತೊಡಗಿಕೊಳ್ಳುತ್ತೀರಿ. ನೀವು ಮುಗಿಸುನ ಮುನ್ನ ನೀವು ಅಪಾರ ಪ್ರಮಾಣದಲ್ಲಿ ಕೊಂಡಿರುತ್ತೀರಿ.

ಮಿಥುನ: ಯಶಸ್ವಿಯಾಗಿ ಮತ್ತು ಯಾವುದೇ ತಡವಿಲ್ಲದೆ ಅಥವಾ ನಿಮ್ಮ ದಾರಿಯಲ್ಲಿ ಅಡೆತಡೆ ಇಲ್ಲದೆ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಮಗೆ ಕಷ್ಟವೇನಲ್ಲ, ಅದನ್ನು ಪೂರ್ಣಗೊಳಿಸಲು ಅಗತ್ಯವಾದ ಕಲಿಕೆಯನ್ನು ಮೊದಲಿಗೆ ನೀವು ಅರ್ಥ ಮಾಡಿಕೊಳ್ಳಲು ಮತ್ತು ಪಡೆದುಕೊಳ್ಳಲು ಬಯಸಿದಾಗ ಮಾತ್ರ ಸಾಧ್ಯವಾಗುತ್ತದೆ. ನಿಮ್ಮ ಕಷ್ಟದ ಪ್ರತಿಫಲ ನಿಮಗೆ ಸಂತೋಷ ಮತ್ತು ಸಂತೃಪ್ತಿ ನೀಡುತ್ತದೆ.

ಕರ್ಕಾಟಕ: ನೀವು ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಅವರೊಂದಿಗೆ ಸಂತೋಷದ ಸಮಯ ನಿಮ್ಮದಾಗುತ್ತದೆ, ಆದರೆ ಕೆಲ ಚಿಂತೆ ಅಥವಾ ಒತ್ತಡ ನಿಮ್ಮನ್ನು ಹಿಂದಕ್ಕೆಳೆಯುತ್ತದೆ. ಆದಾಗ್ಯೂ, ಈ ಎಲ್ಲ ಚಿಂತೆಗಳು ನೀವು ಸಂಜೆ ನಿಮ್ಮ ಮಿತ್ರರೊಂದಿಗೆ ನಿರಾಳತೆ ಅನುಭವಿಸುವಾಗ ದೂರ ಹೋಗುತ್ತವೆ.

ಸಿಂಹ:ಇಂದು, ನಿಮ್ಮ ಜೀವನವಿಡೀ ನೀವು ಕಾಯುತ್ತಿದ್ದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವಿದೆ. ನಿಮ್ಮ ಸಂಗಾತಿಗೆ ಸುಂದರ ಉಡುಗೊರೆ ನೀಡುವ ಸಾಧ್ಯತೆ ಇದೆ. ನೀವು ಕಲೆಯ ಕುರಿತು ಹೆಚ್ಚು ಗಮನ ನೀಡುತ್ತೀರಿ ಮತ್ತು ಈ ಹೊಸದಾಗಿ ಬಂದಿರುವ ಶ್ಲಾಘನೆಯನ್ನು ಗರಿಷ್ಠ ಮಟ್ಟದಲ್ಲಿ ಪ್ರದರ್ಶಿಸಲು ಸಮರ್ಥರಾಗುತ್ತೀರಿ.

ಕನ್ಯಾ:ಇಂದು ವೆಚ್ಚಗಳು ನಿಯಂತ್ರಣವಿಲ್ಲದೆ ಏರುತ್ತವೆ, ಮತ್ತು ಅವುಗಳು ಬಹುತೇಕ ವ್ಯರ್ಥವಾಗಿರುತ್ತವೆ. ಆದಾಗ್ಯೂ, ಧನಾತ್ಮಕ ಶಕ್ತಿಗಳು ವೇಗ ಪಡೆಯುತ್ತಿವೆ, ಮತ್ತು ಅವುಗಳನ್ನು ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಪೂರ್ಣ ಬಳಕೆ ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ತುಲಾ:ನಿಮ್ಮ ಪ್ರೀತಿಪಾತ್ರರೊಂದಿಗೆ ಹತ್ತಿರವಾಗಲು ಇಂದು ಸೂಕ್ತವಾದ ದಿನವಾಗಿದೆ. ನೀವಿಬ್ಬರೂ ನಿಮ್ಮ ಒತ್ತಡದ ಕಾರ್ಯಗಳ ನಡುವೆಯೂ ಒಟ್ಟಾಗಿ ಕಾಲ ಕಳೆಯಲು ಶಕ್ತರಾಗುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಜೆ ಕಾಲ ಕಳೆಯುತ್ತೀರಿ. ಇಂದು ನೀವು ಮಾನಸಿಕವಾಗಿಯೂ ಶಕ್ತಿಯುತವಾಗಿರುತ್ತೀರಿ. ಈ ದಿನವನ್ನು ಸಮರ್ಥವಾಗಿ ಬಳಸಿಕೊಳ್ಳಿರಿ.

ವೃಶ್ಚಿಕ:ಇಂದು, ನೀವು ಎಲ್ಲ ಸಮಯದಲ್ಲೂ ಜಾಗರೂಕರಾಗಿರಬೇಕು. ನೀವು ಹರಕೆಯ ಕುರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಮತ್ತು ಯಾರಿಗೋ ಉದ್ದೇಶಿಸಿದ ಏಟು ನಿಮಗೆ ಬೀಳಬಹುದು. ಎಚ್ಚರಿಕೆಯ ಕಣ್ಣಿನಿಂದ, ನೀವು ನಿಮಗೆ ಮುಜುಗರ ತರುವ ಸನ್ನಿವೇಶದಿಂದ ಪಾರಾಗಬಹುದು. ಆದರೆ, ನಿಮ್ಮ ದಾರಿಯಲ್ಲಿ ಬರುವ ಯಾವುದರಿಂದಲಾದರೂ ನೀವು ಖಂಡಿತವಾಗಿಯೂ ಸಾಕಷ್ಟು ಕಲಿಯುತ್ತೀರಿ.

ಧನು:ನಿಮಗೆ ಅತ್ಯಂತ ಆಸಕ್ತಿಯುಳ್ಳ ಒಂದನ್ನು ಅನುಸರಿಸುತ್ತಿರುವುದರಿಂದ ನಿಮ್ಮ ದಿನ ಸಂಪೂರ್ಣ ಉತ್ಸಾಹ ಮತ್ತು ಭರವಸೆಯಿಂದ ಕೂಡಿರುತ್ತದೆ. ನೀವು ಯಾವುದೇ ಕಾರ್ಯಕ್ರಮದ ಕೇಂದ್ರಬಿಂದುವಾದರೆ ಆಶ್ಚರ್ಯಪಡಬೇಡಿ. ಅದಲ್ಲದೆ, ನಿಮ್ಮ ವ್ಯಾಪಾರಕ್ಕಾಗಿ ನೀವು ದೂರದ ಪ್ರಯಾಣಗಳನ್ನು ಮಾಡುವುದನ್ನು ನಿಮ್ಮ ತಾರೆಗಳು ಸೂಚಿಸುತ್ತಿರುವುದರಿಂದ ನೀವು ಬ್ಯಾಗ್ ಗಳನ್ನು ಸಜ್ಜುಗೊಳಿಸಲು ಪ್ರಾರಂಭಿಸಲು ಬಯಸಬಹುದು.

ಮಕರ:ನಿಮ್ಮ ವಿಶ್ವಾಸ ನಿಮ್ಮನ್ನು ಹಲವು ಸ್ಥಳಗಳಿಗೆ ಕೊಂಡೊಯ್ಯಲಿದೆ. ನಿಮ್ಮ ಧನಾತ್ಮಕ ಹೊರನೋಟ ನಿಮಗೆ ನಿಮ್ಮ ಗುರಿಗಳಿಗೆ ಹತ್ತಿರವಾಗಲು ನೆರವಾಗುತ್ತದೆ. ನೀವು ನಿರುದ್ವಿಗ್ನರಂತೆ ಕಾಣುವವರಲ್ಲ. ನಿಮ್ಮ ಲೆಕ್ಕಾಚಾರದ ನಿರ್ಧಾರಗಳು ಮತ್ತು ಸಾಧನೆಗಳು ನಿಮಗೆ ಯಶಸ್ವಿಯಾಗಲು ನೆರವಾಗುತ್ತವೆ ಎಂದು ನೀವು ತಿಳಿದಿದ್ದೀರಿ.

ಕುಂಭ:ನಿಮಗೆ ಇಂದು ಪಾರ್ಟಿ ಮಾಡಲು ಕಾರಣ ಬೇಕಿಲ್ಲ. ಅದು ನಿಮ್ಮ ಮಿತ್ರನ ವಿವಾಹವಾಗಿರಬಹುದು ಅಥವಾ ಹೊಸ ಕಾರು ಕೊಳ್ಳುವುದಿರಬಹುದು; ನೀವು ಜೀವನವನ್ನು ಇನ್ನಿಲ್ಲದಂತೆ ಸಂಭ್ರಮಿಸುವ ಮನಸ್ಥಿತಿಯಲ್ಲಿದ್ದೀರಿ! ಇದಲ್ಲದೆ, ಇಡೀ ದಿನ ನೀವು ಸರಾಗವಾಗಿ ಮುನ್ನಡೆಯುತ್ತೀರಿ. ನೀವು ವ್ಯಾಪಾರಿ ಅಥವಾ ವೃತ್ತಿಪರರಾಗಿರಲಿ, ನೀವು ನಿಮ್ಮ ಗುರಿಗೆ ಒಂದು ಹೆಜ್ಜೆ ಮುಂದೆ ಸಾಗುತ್ತೀರಿ.

ಮೀನ:ಗೊಂದಲ ಮತ್ತು ಅನಿಶ್ಚಿತತೆ ಕಪ್ಪುಮೋಡಗಳ ಹಾಗೆ ಇಂದಿನ ಆಕಾಶದಲ್ಲಿ ಮೂಡುತ್ತವೆ ಅವು ನಿಮ್ಮ ನಿರ್ಧಾರ ಕೈಗೊಳ್ಳುವ ನಡೆಯಲ್ಲಿ ಮಳೆ ಸುರಿಸುತ್ತವೆ ಮತ್ತು ನಿಮಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಕಷ್ಟವಾಗಿಸುತ್ತವೆ. ಗೊಂದಲದಿಂದ ದೂರವಿರಿ ಮತ್ತು ಯಾವುದೇ ಪ್ರಮುಖ ನಿರ್ಧಾರಗಳನ್ನು ಪ್ರಯತ್ನಿಸಿ ಮತ್ತು ತಡ ಮಾಡಿರಿ ಹಾಗೂ ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬದ್ಧರಾಗಿರಿ.

ABOUT THE AUTHOR

...view details