ಕರ್ನಾಟಕ

karnataka

ETV Bharat / bharat

ಸಿರಿವಂತ ಮಹಿಳೆಯರಿಗೆ ಹೊಸ ಬಾಳು ಕೊಡುವ ನೆಪ: 11 ಮದುವೆಯಾದ ಆಸಾಮಿ, ಅಕ್ಕ-ಪಕ್ಕದ ಬೀದಿಯಲ್ಲೇ ಮೂವರು ಪತ್ನಿಯರು!

ವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆಂಧ್ರಪ್ರದೇಶದ ಆಸಾಮಿಯೊಬ್ಬ ಇದುವರೆಗೆ 11 ಮದುವೆಯಾಗಿದ್ಧಾನೆ. ಒಬ್ಬರಿಗೆ ಗೊತ್ತಿಲ್ಲದೇ ಮತ್ತೊಬ್ಬರನ್ನು ಮದುವೆಯಾಗಿ ವಂಚಿಸಿದ್ದು, ಇಬ್ಬರು ಮಹಿಳೆಯರು ಒಟ್ಟಿಗೆ ಪ್ರತ್ಯಕ್ಷವಾಗಿ ಬಂಡವಾಳ ಬಯಲಿಗೆ ಹಾಕಿದ್ದಾರೆ.

Eternal bride married 11 women in hyderabad
ವಿವಾಹಿತ-ವಿಚ್ಛೇದಿತ ಮಹಿಳೆಯರೇ ಟಾರ್ಗೆಟ್: 11 ಜನರ ಮದುವೆಯಾದ ಆಸಾಮಿ

By

Published : Jul 13, 2022, 11:00 PM IST

Updated : Jul 14, 2022, 4:35 PM IST

ಹೈದರಾಬಾದ್ (ತೆಲಂಗಾಣ): ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ಭೂಪನೊಬ್ಬ ಇದುವರೆಗೆ 11 ಜನ ಮಹಿಳೆಯರನ್ನು ಮದುವೆಯಾಗಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈತ ಆಂಧ್ರಪ್ರದೇಶದ ಸಚಿವರೊಬ್ಬರ ಸಂಬಂಧಿಯೂ ಆಗಿದ್ದು, ಇದೇ ಈತನ ಬಂಡ ಧೈರ್ಯಕ್ಕೆ ಕಾರಣ ಎನ್ನಲಾಗುತ್ತಿದೆ.

ಹೌದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬೇತಂಪುಡಿಯ ಅಡಪ ಶಿವಶಂಕರ್ ಎಂಬ ಆಸಾಮಿಯೇ ಈ ರೀತಿ 11 ಮದುವೆಯಾಗಿದ್ದಾನೆ. ವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈತ, ವಧು-ವರರ ಪರಿಚಯ ವೇದಿಕೆಗಳ ಮೂಲಕ ಮಹಿಳೆಯರನ್ನು ಕಂಡುಕೊಳ್ಳುತ್ತಿದ್ದ. ಹೀಗೆ ಒಬ್ಬರಿಗೆ ಗೊತ್ತಿಲ್ಲದೇ ಮತ್ತೊಬ್ಬರನ್ನು ಮದುವೆಯಾಗಿದ್ದಾನೆ. ಅಚ್ಚರಿ ಎಂದರೆ ಈತನಿಂದ ವಂಚನೆಗೆ ಒಳಗಾದವರೆಲ್ಲರೂ ಉನ್ನತ ಶಿಕ್ಷಣ ಪಡೆದವರು!.

ಒಟ್ಟಿಗೆ ಇಬ್ಬರು ಪತ್ನಿಯರು ಪ್ರತ್ಯಕ್ಷ: ಶಿವಶಂಕರ್​ನ ಮೋಸಕ್ಕೆ ಬಲಿಯಾದ 11 ಜನರ ಪೈಕಿ ಇಬ್ಬರು ಮಹಿಳೆಯರು ಒಟ್ಟಿಗೆ ಪ್ರತ್ಯಕ್ಷವಾಗಿ ಈತನ ಬಂಡವಾಳ ಬಯಲು ಮಾಡಿದ್ದಾರೆ. ಹೈದರಾಬಾದ್​ ಪ್ರೆಸ್​ಕ್ಲಬ್​ನಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಈ ಇಬ್ಬರು, ನಮ್ಮಂತೆ ಶಿವಶಂಕರ್ ಈಗಾಗಲೇ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಮದುವೆ ಹೆಸರಲ್ಲಿ ಮೋಸ ಮಾಡಿ ಸುಮಾರು 60 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದಾನೆ ಎಂದು ಅಳಲು ತೋಡಿಕೊಂಡರು.

ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ ಶಿವಶಂಕರ್​, ಅದೊಂದು ದೊಡ್ಡ ಕೆಲಸ, ಯಾವಾಗ ಬೇಕಾದರೂ ಹೋಗಬೇಕಾಗುತ್ತದೆ ಎಂದು ಕಥೆ ಕಟ್ಟುತ್ತಿದ್ದ. ಆದರೆ, ನಿಜವಾಗಿಯೂ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕೆಲಸ ಇಲ್ಲದ ಶಿವಶಂಕರ್, 'ಗ್ರಾಹಕರ' ಬಳಿ ಹೋಗುವುದಾಗಿ ಹೇಳಿ ಬೇರೆ ಪತ್ನಿಯರ ಬಳಿ ಹೋಗುತ್ತಿದ್ದ ಎಂದು ಸಂತ್ರಸ್ತ ಪತ್ನಿಯರು ಹೇಳಿಕೊಂಡಿದ್ದಾರೆ.

ಅಲ್ಲದೇ, ವಂಚನೆಗೊಳಗಾದ 11 ಮಂದಿ ಮಹಿಳೆಯರಲ್ಲಿ ಏಳು ಮಂದಿ ಕೊಂಡಾಪುರ ಪ್ರದೇಶದವರೇ ಆಗಿದ್ದಾರೆ. ಮುಂದೆ ಬೇರೆ ಯಾವ ಮಹಿಳೆಯರು ಕೂಡ ಶಿವಶಂಕರ್​ನಿಂದ ಮೋಸ ಹೋಗಬಾರದು ಎಂಬ ಉದ್ದೇಶದಿಂದ ಮಾಧ್ಯಮಗಳ ಮುಂದೆ ಬಂದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಶಿವಶಂಕರ್ ವಿರುದ್ಧ ಈಗಾಗಲೇ ಹಲವು ಠಾಣೆಗಳಲ್ಲಿ ಪ್ರಕರಣಗಳಿದ್ದರೂ, ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಈಗಲಾದರೂ, ಶಿವಶಂಕರ್​ಗೆ ಕಠಿಣ ಶಿಕ್ಷೆ ವಿಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಂತ್ರಸ್ತ ಮಹಿಳೆಯರು ಆಗ್ರಹಿಸಿದ್ದಾರೆ.

ಒಂದೇ ಕಾಲೋನಿಯ ಮೂವರು ಪತ್ನಿಯರು:ವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದ ಶಿವಶಂಕರ್​, ಏಳು ಜನರನ್ನು ನಕಲಿ ಡಿವೋರ್ಸ್​​ ದಾಖಲೆಗಳನ್ನು ಸೃಷ್ಟಿಸಿ ಮದುವೆಯಾಗಿದ್ದ. ಈ ಮೂಲಕ ಮೊದಲಿನ ಪತ್ನಿಯರಿಗೆ ವಿಚ್ಛೇದನ ಕೊಡದೇ ಮತ್ತೊಬ್ಬರನ್ನು ವರಿಸುತ್ತಿದ್ದ. ಹಣವಂತ ಮಹಿಳೆಯರಿಗೆ ಹೊಸ ಬಾಳು ಕೊಡುವುದಾಗಿ ಈ ರೀತಿಯಾಗಿ ಬಲೆಗೆ ಹಾಕಿಕೊಂಡು ವಂಚಿಸುತ್ತಿದ್ದ. ಅಲ್ಲದೇ, ಇದರಲ್ಲಿ ಒಂದೇ ಕಾಲೋನಿಯಲ್ಲಿರುವ ಮೂವರು ಮಹಿಳೆಯರನ್ನೇ ಈ ಆಸಾಮಿ ಮದುವೆ ಮಾಡಿಕೊಂಡಿದ್ದ. ಇವರು ಅಕ್ಕ - ಪಕ್ಕದ ಬೀದಿಗಳಲ್ಲೇ ವಾಸಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಮಾಂತ್ರಿಕ ಶಕ್ತಿಯಿಂದ ಮಹಿಳೆಯರನ್ನು ಸೆಳೆಯುವ ಅರ್ಚಕ.. ಪತ್ನಿಯೇ ಹೊರಹಾಕಿದ್ರು ಗಂಡನ ಕರಾಳ ಮುಖ

Last Updated : Jul 14, 2022, 4:35 PM IST

ABOUT THE AUTHOR

...view details