ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಸೇನೆ-ಉಗ್ರರ ನಡುವೆ ಗುಂಡಿನ ಕಾಳಗ - ಜಮ್ಮು-ಕಾಶ್ಮೀರದಲ್ಲಿ ಸೇನೆ - ಉಗ್ರರ ನಡುವೆ ಎನ್‌ಕೌಂಟರ್‌

ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಸೇನೆ-ಉಗ್ರರ ನಡುವೆ ಎನ್‌ಕೌಂಟರ್‌ ಆರಂಭವಾಗಿದೆ. ಚೆಕ್-ಎ-ಚೋಲಂದ್ ಪ್ರದೇಶದಲ್ಲಿ ಶೋಧ ಕಾರ್ಯಚರಣೆ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ ಸೇನೆ ಪ್ರತಿದಾಳಿ ನಡೆಸಿದೆ.

Encounter breaks out between security forces and terrorists in Shopian district of JK
JK Encounter: ಶೋಪಿಯಾನ್‌ನಲ್ಲಿ ಸೇನೆ-ಉಗ್ರರ ನಡುವೆ ಎನ್‌ಕೌಂಟರ್‌

By

Published : Dec 8, 2021, 10:29 AM IST

ಶೋಪಿಯಾನ್‌(ಜಮ್ಮು-ಕಾಶ್ಮೀರ):ಕಣಿವೆ ನಾಡಿನಲ್ಲಿ ಮತ್ತೆ ಉಗ್ರರು ಉಪಟಳ ಮುಂದುವರೆಸಿದ್ದು ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.


ಇಂದು ಬೆಳಗ್ಗೆ ಶೋಫಿಯಾನ್‌ ಜಿಲ್ಲೆಯ ಚೆಕ್-ಎ-ಚೋಲಂದ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಭದ್ರತಾ ಪಡೆಗಳತ್ತ ಗುಂಡು ಹಾರಿಸುತ್ತಿದಂತೆ ಪ್ರತಿದಾಳಿ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಪ್ರವೃತ್ತವಾಗಿದ್ದು, ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.

ಇದನ್ನೂ ಓದಿ:VIDEO: 9,000 ಅಡಿ ಎತ್ತರದ ಹಿಮದಿಂದಾವೃತ ಕಾಶ್ಮೀರಿ ಕಣಿವೆಯಲ್ಲಿ ಸೇನೆ ಜಂಟಿ ಅಭ್ಯಾಸ

ABOUT THE AUTHOR

...view details